ರಾಷ್ಟ್ರೀಯ

ಜಯಲಲಿತಾಗೆ ಅಂತಿಮ ನಮನ ಸಲ್ಲಿಸಿದ ಮೋದಿ

Pinterest LinkedIn Tumblr

11

ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿದ್ದ ಜಯಲಲಿತಾ ಅವರ ಬದುಕಿನೊಂದಿಗಿನ 75 ದಿನಗಳ ಹೋರಾಟ ನಿನ್ನೆಗೆ ಅಂತ್ಯವಾಗಿದ್ದು ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.

ತಮಿಳುನಾಡಿನ ಚೆನ್ನೈನಲ್ಲಿರುವ ರಾಜಾಜಿಹಾಲ್ ನಲ್ಲಿ ಅಂತಿಮ ದರ್ಶನಕ್ಕಾಗಿ ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು ಸಾವಿರಾರು ಅಭಿಮಾನಿಗಳು ಅಮ್ಮನವರ ಅಂತಿಮ ದರ್ಶನವನ್ನು ಪಡೆದರು. ಇದೇ ವೇಳೆ ಚಿತ್ರರಂಗದ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಜಯಲಲಿತಾರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ
ಜಯಲಲಿತಾ ವಿಧವಶ ಹಿನ್ನೆಲೆ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಚೆನ್ನೈಗೆ ಆಗಮಿಸಿದ್ದು ಕೆ. ಜಯಲಲಿತಾರಿಗೆ ಭಾವಪೂರ್ಣ ನಮನ ಸಲ್ಲಿಸಿದರು. ಇದೇ ವೇಳೆ ಜಯಲಲಿತಾರ ಆಪ್ತೆ ಶಶಿಕಲಾ ಮತ್ತು ತಮಿಳುನಾಡು ಸಚಿವ ಪನ್ನೀರು ಸೆಲ್ವಂ ಅವರಿಗೆ ಸ್ವಾಂತನ ಹೇಳಿದರು.

ಜಯಲಲಿತಾರ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರು ಚೆನ್ನೈಗೆ ತೆರಳಿ ಜಯಲಲಿತಾರ ಅಂತಿಮ ದರ್ಶನ ಪಡೆದರು.

ಚಿತ್ರನಟಿ, ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನ ಹಿನ್ನಲೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ಇನ್ನು ಬಹುಭಾಷಾ ನಟ ರಜನಿಕಾಂತ್ ಕುಟುಂಬ ಸಮೇತರಾಗಿ ಆಗಮಿಸಿ ಜಯಲಲಿತಾರ ಅಂತಿಮ ದರ್ಶನ ಪಡೆದರು. ಇದೇ ವೇಳೆ ನಟ ಕಮಲ್ ಹಾಸನ್, ನಾಸಿರ್, ಗೌತಮಿ, ಸುಹಾಸಿಸಿ ಮಣಿರತ್ನಂ, ಖುಷ್ಬೂ ಸೇರಿದಂತೆ ಹಲವರು ಜಯಲಲಿತಾರ ಅಂತಿಮ ದರ್ಶನವನ್ನು ಪಡೆದರು. ನಟ, ನಿರ್ದೇಶಕ ಪ್ರಭುದೇವ ಅವರು ಜಯಲಲಿತಾರ ಅಂತಿಮ ದರ್ಶನ ಪಡೆದರು.

ಗಣ್ಯರ ಸಂತಾಪ
ಜಯಲಲಿತಾ ಸಾವಿನಿಂದ ಅತೀವ ನೋವಾಗಿದೆ. ಬಹುದೊಡ್ಡ ನಾಯಕಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಯಲಲಿತಾ ಎಲ್ಲರಿಗೂ ಮಾದರಿಯಾಗುವಂಥ ರಾಜಕಾರಣಿಯಾಗಿದ್ದರು. ಅಂತಹ ಶ್ರೇಷ್ಠ ನಾಯಕಿ, ಐರನ್ ಲೇಡಿ ಇನ್ನಿಲ್ಲ, ಅವರಿಗೆ ಶ್ರದ್ಧಾಂಜಲಿ ಅರ್ಪಿಸುವೆ: ಖ್ಯಾತ ಮಲಯಾಳಂ ನಟ ಮಮ್ಮುಟಿ

ಜಯಲಲಿತಾರಂತ ಇನ್ನೊಬ್ಬ ರಾಜಕಾರಣಿ ಹುಟ್ಟುವುದಿಲ್ಲ. ಜಯಲಲಿತಾರ ಸಾವು ಎಐಎಡಿಎಂಕೆಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. ತಮಿಳುನಾಡು ಭವಿಷ್ಯಕ್ಕೆ ಕತ್ತಲು ಕವಿದಂತಿದೆ: ಕೇಂದ್ರ ಸಚಿವ ಸದಾನಂದ ಗೌಡ

ಡಿಎಂಕೆ ನಾಯಕ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪುತ್ರ ಸ್ಟಾಲಿನ್ ಸಹ ಜಯಲಲಿತಾರ ಅಂತಿಮ ದರ್ಶನ ಪಡೆದರು.

Comments are closed.