ರಾಷ್ಟ್ರೀಯ

ಉಸ್ತಾದ್ ಬಿಸ್ಮಿಲ್ಲಾ ಖಾನ್ ಶೆಹನಾಯಿ ಕಳ್ಳತನ

Pinterest LinkedIn Tumblr

bismillah-khan-finalವಾರಣಾಸಿ: ಭಾರತರತ್ನ ಗೌರವ ಪಡೆದ ಸಂಗೀತ ಕಲಾವಿದ ಉಸ್ತಾದ್ ಬಿಸ್ಮಿಲ್ಲಾ ಖಾನ್ ಬಳಸುತ್ತಿದ್ದ ಶೆಹನಾಯಿಯನ್ನು ಕಳ್ಳರು ಕದ್ದಿರುವ ವಿಚಾರ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಹದಾ ಸರಾಯ್‍ನಲ್ಲಿರುವ ಪೂರ್ವಜನರ ಮನೆಯಲ್ಲಿ ಬಿಸ್ಮಿಲ್ಲಾ ಖಾನ್ ಅವರ ಮಗ ಕಾಸೀಂ ಹುಸೇನ್ ವಾಸವಾಗಿದ್ದರು. ನವೆಂಬರ್ 30ರಂದು ಮನೆಯಿಂದ ತೆರಳಿದ್ದ ಕಾಸೀಂ ಹುಸೇನ್ ಭಾನುವಾರ ಮನೆಗೆ ಬಂದಾಗ 5 ಶೆಹನಾಯಿ ಕಳ್ಳತನವಾಗಿರುವ ವಿಚಾರ ಗೊತ್ತಾಗಿದೆ.

5 ಶೆಹಾನಯಿಯಲ್ಲಿ ನಾಲ್ಕು ಬೆಳ್ಳಿಯಿಂದ ಮಾಡಲ್ಪಟ್ಟಿದ್ದರೆ, ಒಂದು ಮರದಿಂದ ನಿರ್ಮಿಸಲಾಗಿತ್ತು. ಮರದ ಶೆಹನಾಯಿ ಮೂಲಕ ತಂದೆಯವರು ಮೊಹರಂ ಹಬ್ಬದ 5 ಮತ್ತು 7ನೇ ದಿನ ಸಂಗೀತಾ ನುಡಿಸುತ್ತಿದ್ದರು ಎಂದು ಕಾಸೀಂ ತಿಳಿಸಿದ್ದಾರೆ.

ಬೆಳ್ಳಿಯ ಶೆಹನಾಯಿಯನ್ನು ದಿವಂಗತ ಪ್ರಧಾನಿ ನರಸಿಂಹ ರಾವ್, ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮತ್ತು ಶೈಲೇಶ್ ಭಾಗತ್ ಉಡುಗೊರೆಯಾಗಿ ನೀಡಿದ್ದರು.

ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮನೆಯ ಸಮೀಪ ಇರುವ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಸ್ಮಿಲ್ಲಾ ಖಾನ್ ಅವರ ಶೆಹಾನಯಿ ಕಳ್ಳತನವಾಗುತ್ತಿರುವುದು ಇದೇ ಮೊದಲೆನಲ್ಲ. ಎರಡು ವರ್ಷದ ಹಿಂದೆ ಇವರ ರಿಯಾಜಿ ಶೆಹಾನಯಿ ಕಳ್ಳತನವಾಗಿತ್ತು. ಇದೂವರೆಗೆ ಈ ಶೆಹಾನಯಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಗಂಗಾ ನದಿಯ ಘಟ್‍ನಲ್ಲಿ ಪ್ರತಿದಿನ ಈ ಶೆಹಾನಯಿ ಮೂಲಕ ಬಿಸ್ಮಿಲ್ಲಾ ಖಾನ್ ಸಂಗೀತ ನುಡಿಸುತ್ತಿದ್ದರು.

Comments are closed.