ರಾಷ್ಟ್ರೀಯ

ಮೋದಿಯನ್ನು ಭೇಟಿಯಾದ ಗ್ರೇಟ್ ಖಲಿ ನೋಟ್ ನಿಷೇಧದ ಬಗ್ಗೆ ಹೇಳಿದ್ದೇನು ಗೊತ್ತಾ..?

Pinterest LinkedIn Tumblr

great-khali-with-pm

ನವದೆಹಲಿ: ಪ್ರಸಿದ್ಧ ಕುಸ್ತಿಪಟು ಖಲಿ ನೋಟು ನಿಷೇಧದ ಕ್ರಮವನ್ನು ಸ್ವಾಗತಿಸಿದ್ದು ದೀರ್ಘಾವಧಿ ಪ್ರಯೋಜನಗಳಿಗೆ ಹೋಲಿಸಿದರೆ ನೋಟು ನಿಷೇಧದಿಂದ ಉಂಟಾಗುತ್ತಿರುವ ಸಮಸ್ಯೆಗಳು ಅತ್ಯಲ್ಪ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಿ.2 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ದಲೀಪ್ ಸಿಂಗ್ ರಾಣಾ (ಗ್ರೇಟ್ ಖಲಿ), ನೋಟು ನಿಷೇಧ ಕ್ರಮವನ್ನು ಸ್ವಾಗತಿಸಿದ್ದು, ದೀರ್ಘಾವಧಿಯಲ್ಲಿ ಜನರಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ. ಕೇಂದ್ರ ಸರ್ಕಾರದ ಕ್ರಮ ಸದ್ಯಕ್ಕೆ ಸಮಸ್ಯೆಯಾಗಿರಬಹುದು, ಆದರೆ ದೀರ್ಘಾವಧಿಯಲ್ಲಿ ಇದರಿಂದ ಜನರಿಗೆ ಲಾಭವಾಗಲಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ದೇಶದ ಹಿತಾಸಕ್ತಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ. ಅವನ್ನು ಅಭಿನಂದಿಸಲು ಬಯಸುತ್ತೇನೆ, ಆರಂಭದಲ್ಲಿ ಕಠಿಣವಾದರೂ ನಂತರದ ದಿನಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರದಿಂದ ಜನತೆಗೆ ಒಳಿತಾಗಲಿದೆ ಎಂದು ಪ್ರಧಾನಿಗೆ ತಿಳಿಸಿರುವುದಾಗಿ ಗ್ರೇಟ್ ಖಲಿ ಹೇಳಿದ್ದಾರೆ.

Comments are closed.