ರಾಷ್ಟ್ರೀಯ

15 ಪಾಕ್ ರೇಂಜರ್, 10ಕ್ಕೂ ಹೆಚ್ಚು ಭಯೋತ್ಪಾದಕರ ಹತ್ಯೆ

Pinterest LinkedIn Tumblr

armyನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿದ ಬಳಿಕ ನಡೆಯುತ್ತಿರುವ ಕದನವಿರಾಮ ಉಲ್ಲಂಘನೆಗಳ ಕಾಲದಲ್ಲಿ ಭಾರತೀಯ ಸೇನೆಯು 15 ಮಂದಿ ಪಾಕ್ ಸೈನಿಕರನ್ನು ಕೊಂದಿದ್ದು, 10ಕ್ಕೂ ಹೆಚ್ಚು ಭಯೋತ್ಪಾದಕರ ಸದ್ದಡಗಿಸಿದೆ ಎಂದು ಬಿಎಸ್ಎಫ್ ಮಹಾ ನಿರ್ದೇಶಕ ಕೆ.ಕೆ. ಶರ್ಮಾ ಬುಧವಾರ ಇಲ್ಲಿ ಹೇಳಿದರು.

ಪಾಕಿಸ್ತಾನದಿಂದ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಗಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಹಲವಾರು ಗಡಿ ಹೊರಠಾಣೆಗಳನ್ನೂ ನಾಶ ಪಡಿಸಿದೆ ಎಂದು ಅವರು ನುಡಿದರು.

ಗಡಿ ಪ್ರದೇಶದ ಸಣ್ಣ ಸುರಂಗಗಳ ಮೂಲಕ ನುಸುಳಿವಿಕೆ ನಡೆಯುತ್ತಿದೆ. ಈವರೆಗಿನ ತಂತ್ರಜ್ಞಾನದಲ್ಲಿ ಸುರಂಗ ಪತ್ತೆಗೆ ಯಾವುದೇ ಮಾರ್ಗ ಇಲ್ಲ ಅವರು ಸಾಂಬಾ ವಿಭಾಗದಲ್ಲಿ ನಡೆದ ಭಯೋತ್ಪಾದಕರ ನುಸುಳುವಿಕೆ ಬಗ್ಗೆ ಪ್ರಸ್ತಾಪಿಸುತ್ತಾ ಹೇಳಿದರು. ನಮ್ಮ ಗಡಿ ಬೇಲಿಗಳನ್ನು ಆಧುನೀಕರಿಸಲು ತೀವ್ರ ಯತ್ನಗಳನ್ನು ನಾವು ನಡೆಸುತ್ತಿದ್ದೇವೆ ಎಂದೂ ಅವರು ನುಡಿದರು. ಸಾಂಬಾ ನುಸುಳುವಿಕೆ ಮತ್ತು ಸುರಂಗ ವಿಚಾರವನ್ನು ನಾವು ಪಾಕ್ ಅಧಿಕಾರಿಗಳ ಜೊತೆಗೆ ಪ್ರಸ್ತಾಪಿಸಲಿದ್ದೇವೆ ಎಂದು ಅವರು ಹೇಳಿದರು.

ಯೋಧರು ಮತ್ತು ಅವರ ಕುಟುಂಬ ಸದಸ್ಯರನ್ನು ಹಲವಾರು ನಗದು ರಹಿತ ಯೋಜನೆಗಳಿಗೆ ಸೇರಿಸಲಾಗಿದೆ. ಬಾಬಾ ರಾಮದೇವ್ ಮಾರ್ಗದರ್ಶನದಲ್ಲಿ ಯೋಧರಿಗೆ 45 ನಿಮಿಷಗಳ ಯೋಗ ಶಿಕ್ಷಣ ನೀಡಲಾಗುತ್ತಿದ್ದು ಸೈನಿಕರ ಸರಾಸರಿ ತೂಕ ಈಗ ತಗ್ಗಿದೆ ಎಂದು ಅವರು ಹೇಳಿದರು.

Comments are closed.