ರಾಷ್ಟ್ರೀಯ

ವಾಟ್ಸಪ್‍ ಗ್ರೂಪ್ ಗಳಲ್ಲಿ ಮೋದಿಯರ ಆಕ್ಷೇಪಣಾರ್ಹ ಚಿತ್ರ: ಅಧಿಕಾರಿ ಅಮಾನತು

Pinterest LinkedIn Tumblr

modhiiಉತ್ತರಪ್ರದೇಶ: ವಾಟ್ಸಪ್ ಗ್ರೂಪ್‍‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಆಕ್ಷೇಪಣಾರ್ಹ ಚಿತ್ರ ಹರಿಯಬಿಟ್ಟ ಪ್ರಕರಣದಲ್ಲಿ ಪಂಚಾಯತ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.

ಅದೇ ವೇಳೆ ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಕಾಲೇಜಿನ ಮ್ಯಾನೇಜರ್‍ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಾಟ್ಸಪ್ ಗ್ರೂಪ್‍ನಲ್ಲಿ ಪಂಚಾಯತ್ ರಾಜ್ ಅಭಿವೃದ್ದಿ ಇಲಾಖೆಯ ಅಧಿಕಾರಿ ಹಿಫಾಜತ್ ಉಲ್ಲಾಹ್ ಖಾನ್ ಎಂಬವರು ಮೋದಿಯವರ ಆಕ್ಷೇಪಣಾರ್ಹ ಚಿತ್ರವೊಂದನ್ನು ಹಂಚಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೆಹೆದಿ ಪಂಚಾಯತ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾನ್ ಅವರಿಗೆ ಈ ಸಂಬಂಧ ಶೋಕಾಸ್ ನೋಟಿಸ್ ಕಳಿಸಿದ್ದರೂ, ಖಾನ್ ನೀಡಿದ ಉತ್ತರ ತೃಪ್ತಿಕರವಾಗಿರಲಿಲ್ಲ, ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ಹರಿಓಂ ಸಿಂಗ್ ಎಂಬವರ ವಿರುದ್ಧ ಕೇಸು ದಾಖಲಿಸಲಾಗಿದೆ.

ಕಾಲೇಜು ಮ್ಯಾನೇಜರ್ ಆಗಿರುವ ಸಿಂಗ್, ವಾಟ್ಸಪ್ ಗ್ರೂಪ್‍ನಲ್ಲಿ ಮೋದಿಯವರ ಅಕ್ಷೇಪಣಾರ್ಹ ಫೋಟೋವೊಂದನ್ನು ಹರಿಯಬಿಟ್ಟಿದ್ದರು.

ಸಿಂಗ್ ವಿರುದ್ಧ ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಂದ್ರ ಸಿಂಗ್ ರಾಥೋಡ್ ಎಂಬವರು ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಮುಂದುವರಿದಿದೆ.

Comments are closed.