ರಾಷ್ಟ್ರೀಯ

ಹೊಸ ದಾಖಲೆ ಬರೆದ ರಿಲಯನ್ಸ್ ಜಿಯೋ ! ದಾಖಲೆ ಏನು ಗೊತ್ತಾ..?

Pinterest LinkedIn Tumblr

jio

ಮುಂಬೈ: ರಿಲಯನ್ಸ್ ಜಿಯೋ ಕೇವಲ 83 ದಿನಗಳಲ್ಲಿ 5 ಕೋಟಿ ಗ್ರಾಹಕರನ್ನು ಸಂಪಾದಿಸುವ ಮೂಲಕ ಭಾರತದಲ್ಲಿ ಹೊಸ ದಾಖಲೆಯನ್ನು ಬರೆದಿದೆ.

ಸೆಪ್ಟೆಂಬರ್ 5ರಿಂದ ಇಲ್ಲಿಯವರೆಗೆ ಪ್ರತಿ ನಿಮಿಷಕ್ಕೆ 1000, ದಿನಕ್ಕೆ 6 ಲಕ್ಷ ಗ್ರಾಹಕರನ್ನು ಸಂಪಾದಿಸುತ್ತಿದೆ ಎಂದು ತನ್ನ ಪ್ರಕಟಣೆಯಲ್ಲಿ ಕಂಪೆನಿ ಹೇಳಿಕೊಂಡಿದೆ. ಏರ್‍ಟೆಲ್ ಕಂಪೆನಿ 12 ವರ್ಷದಲ್ಲಿ 5 ಕೋಟಿ ಗ್ರಾಹಕರನ್ನು ಹೊಂದಿದ್ದರೆ, ವೋಡಾಫೋನ್ ಮತ್ತು ಐಡಿಯಾ ಕಂಪೆನಿ ಈ ಸಂಖ್ಯೆ ತಲುಪಲು 13 ವರ್ಷ ತಗೆದುಕೊಂಡಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಕಂಪೆನಿ ಡಿ.30ರವರೆಗೆ ವೆಲಕಂ ಆಫರ್ ನೀಡಿದೆ. ಈಗ ಈ ಆಫರನ್ನು ಮಾರ್ಚ್‍ವರೆಗೂ ವಿಸ್ತರಿಸಲು ಕಂಪೆನಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಡಿ.27ರಂದು ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.

ಈ ಹಿಂದೆ ಜಿಯೋ ಉಚಿತ ಕರೆಯನ್ನು ನೀಡುವ ಮೂಲಕ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ನಿಯಮವನ್ನು ಉಲ್ಲಂಘಿಸುತ್ತಿದೆ ಎಂದು ಏರ್‍ಟೆಲ್, ವೋಡಾಫೋನ್ ಕಂಪೆನಿಗಳು ದೂರು ನೀಡಿದ್ದವು. ಈ ದೂರಿನ ಬಗ್ಗೆ ಟೆಲಿಕಾಂ ಕಂಪೆನಿಗಳಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ ಟ್ರಾಯ್ ಜಿಯೋದ 90 ದಿನಗಳ ಪ್ರಮೋಷನಲ್ ಆಫರ್ ಟ್ರಾಯ್ ನಿಯಮಕ್ಕೆ ಅನುಗುಣವಾಗಿದೆ ಎಂದು ಸ್ಟಷ್ಟಪಡಿಸಿತ್ತು. ಟೆಲಿಕಾಂ ಕಂಪೆನಿಗಳು ಒಂದು ನಿಮಿಷದ ಒಂದು ಕರೆಗೆ 14 ಪೈಸೆ ಆಗುತ್ತದೆ. ಆದರೆ ಜಿಯೋ ಈ ನಿಯಮವನ್ನೇ ಉಲ್ಲಂಘಿಸಿ ಕರೆಯನ್ನೇ ಉಚಿತ ನೀಡುತ್ತಿದೆ ಎಂದು ಆರೋಪಿಸಿತ್ತು.

Comments are closed.