ರಾಷ್ಟ್ರೀಯ

ಪಠಾಣ್ ಕೋಟ್ ವಾಯುನೆಲೆಗೆ ಉಗ್ರರು ನುಗ್ಗಿದ ಸಂಖ್ಯೆ ಕೇವಲ ನಾಲ್ಕು!

Pinterest LinkedIn Tumblr

patankot-webನವದೆಹಲಿ: ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ್ದ ಉಗ್ರರು ಎಷ್ಟು ಜನ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು ಪಠಾಣ್ ಕೋಟ್ ವಾಯುನೆಲೆಗೆ ನುಗ್ಗಿದ್ದು ನಾಲ್ಕೇ ಜನ ಉಗ್ರರು ಎಂದು ಸ್ಪಷ್ಟನೆ ನೀಡಿದೆ.
ಸಂಸತ್ ನಲ್ಲಿ ಕಾಂಗ್ರೆಸ್ ಪ್ರಶ್ನೆಗೆ ಉತ್ತರಿಸುತ್ತಾ, ಉಗ್ರರ ಸಂಖ್ಯೆ ಬಗ್ಗೆ ಮಾಹಿತಿ ನೀಡಿರುವ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಗಂಗಾರಾಮ್ ಅಹಿರ್, ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಯೋತ್ಪಾದಕ ದಾಳಿ ನಡೆಸಲು ಅಲ್ಲಿಗೆ ನುಗ್ಗಿದ್ದು 4 ಜನ ಉಗ್ರರು ಎಂದು ಲಿಖಿತ ಉತ್ತರ ನೀಡಿದ್ದಾರೆ.
ವಾಯುನೆಲೆಯೊಳಗೆ ನುಗ್ಗಿದ್ದ ಎಲ್ಲಾ ಉಗ್ರರನ್ನೂ ಸೇನಾಪಡೆ ಹೊಡೆದುರುಳಿಸಿದ್ದು 4 ಎಕೆ ರೈಫಲ್ ಗಳು 32 ಎಕೆ ಮ್ಯಾಗಜೀನ್, 3 ಪಿಸ್ತೂಲು, 7 ಪಿಸ್ತೂಲ್ ಮ್ಯಾಗಜೀನ್ ಗಳು ಒಂದು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್, 40 ಹ್ಯಾಂಡ್ ಗ್ರೆನೇಡ್ ಗಳು ಒಂದು ಡ್ರ್ಯಾಗರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚರು ಸದನದಲ್ಲಿ ಕಾಂಗ್ರೆಸ್ ಸಂಸದರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಪಠಾಣ್ ಕೋಟ್ ವಾಯುನೆಲೆಯ ಮೇಲಿನ ದಾಳಿ ಪ್ರಕರಣದಲ್ಲಿ ಒಟ್ಟು 6 ಜನ ಉಗ್ರರು ಶಾಮೀಲಾಗಿದ್ದರು ಎಂದು ಹೇಳಿದ್ದರು. ಆದರೆ ಈಗ ಗೃಹ ಖಾತೆ ರಾಜ್ಯ ಸಚಿವರು ನೀಡಿರುವ ಅಂಕಿ-ಅಂಶಗಳು ಈ ಹಿಂದಿನ ಹೇಳಿಕೆಗಳಿಗಿಂತ ಭಿನ್ನವಾಗಿದೆ.

Comments are closed.