ರಾಷ್ಟ್ರೀಯ

ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಬಿಜೆಪಿ ಪ್ರಚಂಡ ಜಯಭೇರಿ

Pinterest LinkedIn Tumblr

BJP-logoಗಾಂಧಿನಗರ: ಕಪ್ಪು ಹಣ, ಭ್ರಷ್ಟಾಚಾರ ಮತ್ತು ನಕಲಿ ನೋಟು ನಿಗ್ರಹಕ್ಕಾಗಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ರದ್ದು ನಿರ್ಣಯದ ಬಳಿಕ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ವಿಜಯ ಸಾಧಿಸಿದೆ.

ಮಹಾರಾಷ್ಟ್ರದ ಚುನಾವಣೆಗಳಲ್ಲಿ ಸೋಮವಾರ ವಿಜಯಗಳಿಸಿದ ವರದಿಗಳ ಬೆನ್ನಲ್ಲೇ ಮಂಗಳವಾರ ಗುಜರಾತಿನಲ್ಲೂ ಬಿಜೆಪಿ ಪ್ರಚಂಡ ಜಯಭೇರಿ ಭಾರಿಸಿದೆ. ಗುಜರಾತಿನ 16 ಜಿಲ್ಲೆಗಳ ನಗರಸಭೆ, ಜಿಲ್ಲಾ ಪಂಚಾಯತಿಗಳ 126 ಸ್ಥಾನಗಳ ಪೈಕಿ 109 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಇವುಗಳ ಪೈಕಿ 40 ಸ್ಥಾನಗಳನ್ನು ಪಕ್ಷವು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿದೆ.

ಕಾಂಗ್ರೆಸ್ ಪಕ್ಷವು ಕೇವಲ 17 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಿದೆ. ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಾಗಿರುವ ಗುಜರಾತಿನಲ್ಲಿ ಈದಿನದ ಚುನಾವಣಾ ಫಲಿತಾಂಶ ಬಿಜೆಪಿಗೆ ಬಲು ದೊಡ್ಡ ಹುಮ್ಮಸ್ಸನ್ನು ತಂದುಕೊಟ್ಟಿದೆ. ’ಭಾರತದ ಜನತೆ ನೋಟು ನಿಷೇಧವನ್ನು ಬೆಂಬಲಿಸಿದ್ದಾರೆ. ಎರಡು ರಾಜ್ಯಗಳಲ್ಲಿ ನಡೆದಿರುವ ಚುನಾವಣಾ ಫಲಿತಾಂಶಗಳು ದೇಶದ ಹಾಲಿ ಅಭಿಮತವನ್ನು ವ್ಯಕ್ತ ಪಡಿಸಿವೆ. ಜನತೆ ನಮ್ಮೊಂದಿಗಿದ್ದಾರೆ ಎಂಬುದರ ಅರಿವು ನಮಗೆ ಆಗಿದೆ’ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ನುಡಿದರು.

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯು 147 ನಗರಸಭೆ ಮತ್ತು 17ಪಂಚಾಯತುಗಳ 3705 ಸ್ಥಾನಗಳ ಪೈಕಿ 851 ಸ್ಥಾನಗಳನ್ನು ಗೆದ್ದಿತ್ತು.

Comments are closed.