
ಥಾಣೆ: ಗ್ರಾಹಕರಿಗೆ ಏಳು ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಸಹಕಾರಿ ಬ್ಯಾಂಕ್ ಆರು ಸಿಬ್ಬಂದಿ ಸೇರಿದಂತೆ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಶನಿವಾರ ಪೊಲೀಸರು ತಿಳಿಸಿದ್ದಾರೆ.
ವಂಚನೆ ಪ್ರಕರಣ ಸಂಬಂಧ ನಿನ್ನೆ ಸಂಜೆ ಇಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ನಂತರ ಪ್ರಕರಣವನ್ನು ಆರ್ಥಿಕ ವ್ಯವಹಾರಗಳ ಘಟಕಕ್ಕೆ ವರ್ಗಾಯಿಸಲಾಗಿದೆ ಎಂದು ಚಿತಲ್ಸರ್ ಪೊಲೀಸ್ ಠಾಣೆಯ ಇನ್ಸ್ ಫೆಕ್ಟರ್ ಜಿ.ಡಿ.ಪಿಂಗ್ಲೆ ಅವರು ಹೇಳಿದ್ದಾರೆ.
ವಂಚನೆ, ನಕಲಿ ಹಾಗೂ ಅಪ್ರಮಾಣಿಕತೆ ಆರೋಪದ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆ ಏಳು ಆರೋಪಿಗಳು ಸಿಕೆಪಿ ಸಹಕಾರಿ ಬ್ಯಾಂಕ್ ನ ಲೋಕ್ ಪುರಂನ ಶಾಖೆಯಲ್ಲಿ 6,92,19,047 ಕೋಟಿ ರುಪಾಯಿ ವಂಚಿಸಿರುವುದಾಗಿ ಆರೋಪಿಸಿ ಬ್ಯಾಂಕ್ ನಿರ್ದೇಶಕ ರಾಜು ಫನ್ಸೆ ಅವರು ಪೊಲೀಸರಿಗೆ ದೂರು ನೀಡಿದ್ದರು.
Comments are closed.