ರಾಷ್ಟ್ರೀಯ

ಎಲ್ಲೆಲ್ಲಿ ಹಳೆಯ ನೋಟುಗಳನ್ನು ಚಲಾವಣೆ ಮಾಡಬಹುದು? 

Pinterest LinkedIn Tumblr

note

ನವದೆಹಲಿ: ಕೇಂದ್ರ ಸರ್ಕಾರ ರದ್ದುಪಡಿಸಿರುವ ಹಳೆ ನೋಟುಗಳ ಬಳಕೆಯ ಗಡುವು ಇಂದು ಮಧ್ಯ ರಾತ್ರಿ 12ಕ್ಕೆ ಮುಕ್ತಾಯವಾಗಲಿದೆ. ಜನರ ಬೇಡಿಕೆಯ ಅನುಸಾರವಾಗಿ ಕೇಂದ್ರ ಸರ್ಕಾರ ಈ ಗಡುವನ್ನು ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇಂದು ಮಧ್ಯರಾತ್ರಿಯವರೆಗೂ ಹಳೆಯ ನೋಟುಗಳನ್ನು ಎಲ್ಲೆಲ್ಲಿ ಬಳಸಬಹುದು ಎಂಬುದರ ಪಟ್ಟಿ ಇಲ್ಲಿದೆ.

1. ಪೆಟ್ರೋಲ್ ಬಂಕ್ ಗಳು
2. ರೈಲ್ವೇ ಟಿಕೆಟ್, ರೈಲ್ವೇ ಕ್ಯಾಟರಿಂಗ್ ಬಸ್‌ ಟಿಕಿಟ್‌ ಮತ್ತು ವಿಮಾನ ಟಿಕೆಟ್‌ ಬುಕ್ಕಿಂಗ್
3. ಸರ್ಕಾರಿ ಆಸ್ಪತ್ರೆಗಳು, ಶವಾಗಾರಗಳು
4. ಆದಾಯ ತೆರಿಗೆ ಇಲಾಖೆ ಮತ್ತು ಕಂದಾಯ ಇಲಾಖೆ
5. ಹಾಲಿನ ಕೇಂದ್ರಗಳು, ಮೆಡಿಕಲ್ ಕೇಂದ್ರಗಳು, ಮೆಟ್ರೋ ರೈಲು

6. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಕೇಂದ್ರ
7. ಬಿತ್ತನೆ ಬೀಜ ಮಾರಾಟ ಕೇಂದ್ರ ಮತ್ತು ಸರ್ಕಾರಿ ಕೃಷಿಕ ವಸ್ತುಗಳ ಕೇಂದ್ರ
8. ನೀರು ಮತ್ತು ವಿದ್ಯುತ್ ಬಿಲ್ ಪಾವತಿ ಕೇಂದ್ರಗಳು
9. ಹಾಪ್ ಕಾಮ್ಸ್, ಎಂಎಸ್ ಐಎಲ್, ಸರ್ಕಾರಿ ಖಾದಿ ಬಂಡಾರ

Comments are closed.