ರಾಷ್ಟ್ರೀಯ

ಶೌರ್ಯ ಪ್ರಶಸ್ತಿಗೆ ಭಾಜನರಾದ ರಾಧಿಕಾ ಮೆನನ್‌

Pinterest LinkedIn Tumblr

radhika_menon_hero

ಲಂಡನ್ : ಮುಳುಗುತ್ತಿದ್ದ ದೋಣಿಯಿಂದ ಏಳು ಮೀನುಗಾರರನ್ನು ರಕ್ಷಿಸಿ ಸಾಹಸ ಪ್ರದರ್ಶಿಸಿದ ಭಾರತದ ಸರಕು ಸಾಗಾಣಿಕೆ ಹಡಗಿನ ಮೊದಲ ಮಹಿಳಾ ಕ್ಯಾಪ್ಟನ್‌, ಕೇರಳ ಮೂಲದ ರಾಧಿಕಾ ಮೆನನ್‌ ಅವರು, ಅಂತರರಾಷ್ಟ್ರೀಯ ಸಾಗರ ಸಂಸ್ಥೆಯ (ಐಎಂಒ) ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಐಎಂಒದ ಕೇಂದ್ರ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ರಾಧಿಕಾ ಮೆನನ್ ಅವರು ತಮ್ಮ ಶೌರ್ಯ ಸಾಧನೆಗಾಗಿ ಪದಕ ಮತ್ತು ಪ್ರಮಾಣ ಪತ್ರ ಸ್ವೀಕರಿಸಿದರು.

ಸಮುದ್ರದಲ್ಲಿ ಅಸಾಧಾರಣ ಸಾಹಸ ಪ್ರದರ್ಶಿಸಿದ್ದಕ್ಕಾಗಿ ಶೌರ್ಯ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

Comments are closed.