ರಾಷ್ಟ್ರೀಯ

ನೋಟು ರದ್ದತಿ ಬಗ್ಗೆ ಸದನದಲ್ಲಿ ಮೋದಿ ಉತ್ತರಕ್ಕೆ ಪ್ರತಿಪಕ್ಷ ಸದಸ್ಯರಿಂದ ಸಂಸತ್‌ ಭವನದ ಆವರಣದಲ್ಲಿ ಧರಣಿ

Pinterest LinkedIn Tumblr

prati

ನವದೆಹಲಿ: ನೋಟು ರದ್ದತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸದನದೊಳಗೆ ಉತ್ತರಿಸಬೇಕೆಂದು ಪಟ್ಟು ಹಿಡಿದಿರುವ ಪ್ರತಿಪಕ್ಷ ಸದಸ್ಯರು ಸಂಸತ್‌ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾದ ನ.16ರಿಂದಲೂ ನೋಟು ರದ್ದತಿ ವಿಚಾರವಾಗಿ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಗದ್ದಲ ನಡೆಸುತ್ತಿದ್ದಾರೆ. ಗದ್ದಲದಿಂದಾಗಿ ಸದನದ ಕಲಾಪವನ್ನು ಮತ್ತೆ ಮತ್ತೆ ಮುಂದೂಡಲಾಗುತ್ತಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈಗಾಗಲೇ ಕಳೆದ ಆರು ದಿನಗಳಿಂದ ಪ್ರತಿಭಟನೆ-ಧರಣಿ ನಡೆಸಿ ಕಲಾಪಕ್ಕೆ ಅಡ್ಡಿ ಉಂಟು ಮಾಡಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಅಮ್ ಆದ್ಮಿ ಪಕ್ಷ, ಕಮ್ಯೂನಿಸ್ಟ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಪಾರ್ಲಿಮೆಂಟ್ ಹೊರಗೂ ಹೋರಾಟವನ್ನು ತೀವ್ರಗೊಳಿಸಿವೆ.

ರಾಜಧಾನಿ ದೆಹಲಿಯಲ್ಲಿ ಸಂಸತ್ ಭವನದ ಗಾಂಧಿ ಪ್ರತಿಮೆ ಮುಂದೆ ಸಮಾವೇಶಗೊಂಡ 200 ಸಂಸದರು ಧರಣಿ ಸರ್ಕಾರ ನಿರ್ಧಾರವನ್ನು ಕಟುವಾಗಿ ಟೀಕಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ದೇಶದ್ಯಾಂತ ಜನರು ಪರಿತಪಿಸುತ್ತಿದ್ದಾರೆ. ನೋಟಿನ ತೊಂದರೆಯಿಂದಾಗಿ ಈವರೆಗೆ 75 ಮಂದಿ ಮೃತರಾಗಿದ್ಧಾರೆ. ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ನಿಲುವಳಿ ಸೂಚನೆ ಮೂಲಕ ಆಗ್ರಹಿಸಲಾಗಿದೆ. ಆದರೂ ಈವರೆಗೆ ಪ್ರಧಾನಿ ಸದನದಲ್ಲಿ ಉತ್ತರಿಸಲು ಹಾಜರಾಗಿಲ್ಲ. ಇದನ್ನು ಖಂಡಿಸಿ ನಾವು ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದರು.

Comments are closed.