ರಾಷ್ಟ್ರೀಯ

ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಖಚಿತ ಸಾಕ್ಷ್ಯದೊಂದಿಗೆ ರುಜುವಾತಾದರೆ ಮಾತ್ರ ಶಿಕ್ಷೆ : ಸುಪ್ರೀಂ

Pinterest LinkedIn Tumblr

suprimದೆಹಲಿ: ವರದಕ್ಷಿಣೆಗಾಗಿ ಕಿರುಕುಳ ನೀಡಿರುವುದು ಖಚಿತ ಸಾಕ್ಷ್ಯದೊಂದಿಗೆ ರುಜುವಾತಾದರೆ ಮಾತ್ರ ಸಾಕ್ಷಾಧಾರ ಕಾಯ್ದೆಯಲ್ಲಿ ಆರೋಪಿಯೊಬ್ಬನ ವಿರುದ್ಧ ಶಿಕ್ಷೆಯನ್ನು ದೃಢಪಡಿಸಲಾವುದು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ್ ಮತ್ತು ಅಮಿತವ್ ರಾಯ್ ಅವರನ್ನೊಳಗೊಂಡ ನ್ಯಾಾಯಪೀಠವು ಈ ಮಹತ್ವದ ತೀರ್ಪು ನೀಡಿದೆ. ಸಾಕ್ಷಾಧಾರ ಕಾಯ್ದೆಯಲ್ಲಿ ವರದಕ್ಷಿಣೆ ಕಿರುಕುಳಗಳಲ್ಲಿ ಶಿಕ್ಷೆಗಳನ್ನು ಖಾಯಂಗೊಳಿಸುವ ಮಾರ್ಪಾಡು ಉಪಬಂಧಗಳನ್ನು ಸೇರಿಸಲಾಗಿದೆ. ಮದುವೆಯಾದ ಏಳು ವರ್ಷಗಳ ಒಳಗೆ ವಿವಾಹಿತೆಯೂ ವರದಕ್ಷಿಣೆಗಾಗಿ ಕಿರುಕುಳಕ್ಕೆ ಒಳಗಾಗಿ ಮೃತಪಟ್ಟರೆ ಅದನ್ನು ಸಾಕ್ಷಾಧಾರ ಸಹಿತ ಸ್ಪಷ್ಟಪಡಿಸಬೇಕು. ಆಗ ಮಾತ್ರ ಈ ಕಾಯ್ದೆಯಡಿ ವರದಕ್ಷಿಣೆ ಕಿರುಕುಳ ಸಾವು ಆರೋಪಕ್ಕೆ ಗುರಿಯಾದ ವ್ಯಕ್ತಿಯ ವಿರುದ್ಧ ದಂಡನೆಯನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

Comments are closed.