ರಾಷ್ಟ್ರೀಯ

ಮಿಝೋರಾಂ: ಕೈಬರಹದ ಕಾಗದದ ನೋಟು!

Pinterest LinkedIn Tumblr

mizo-finalಮಿಝೋರಾಂ: ನೋಟು ಬದಲಾವಣೆಗಾಗಿ ನಿತ್ಯದ ಕೆಲಸಗಳಿಗೆ ವಿರಾಮ ಹಾಕಿ ಸರದಿಯಲ್ಲಿ ನಿಲ್ಲುವುದು ಸಾಮಾನ್ಯ. ಆದರೆ ಇಲ್ಲಿನ ಗ್ರಾಮಸ್ಥರು ತಮ್ಮದೇ ನೋಟುಗಳನ್ನು ಚಲಾವಣೆಗೆ ತಂದು ಎಂದಿನಂತೆ ಕಾಯಕದಲ್ಲಿ ತೊಡಗಿದ್ದಾರೆ.

ದೇಶದಾದ್ಯಂತ ₹1000 ಮತ್ತು 500 ಮುಖಬೆಲೆಯ ನೋಟು ರದ್ದಾದ ಬಳಿಕ ಬ್ಯಾಂಕ್‌, ಎಟಿಎಂಗಳ ಮುಂದೆ ಸಾಲುಗಟ್ಟಿ ಹೊಸ ನೋಟು ಅಥವಾ ಚಿಲ್ಲರೆ ಪಡೆಯುವುದು ನಿತ್ಯದ ಅಗತ್ಯ ಕಾರ್ಯವಾಗಿ ಪರಿಣಮಿಸಿದೆ. ಇಂಥ ಪರಿಸ್ಥಿತಿಯಲ್ಲಿ ಭಾರತ ಮತ್ತು ಮ್ಯಾನ್ಮಾರ್‌ ಗಡಿಯ ಖಾವ್ಬಂಗ್‌ ಗ್ರಾಮಸ್ಥರು ಕಾಗದದ ಗುರುತಿನ ಚೀಟಿಗಳನ್ನು ಬಳಸಿ ಹಣಕಾಸು ವ್ಯವಹಾರ ಮಾಡುತ್ತಿದ್ದಾರೆ.

ಹೊಸ ನೋಟುಗಳ ಚಲಾವಣೆ ಹೆಚ್ಚುವವರೆಗೂ ಹಳ್ಳಿಗರು ಅಗತ್ಯ ಪದಾರ್ಥಗಳ ಖರೀದಿಗೆ ಕಾಗದದ ಚೀಟಿಗಳನ್ನೇ ಹಣದಂತೆ ಬಳಸಲು ನಿರ್ಧರಿಸಿದ್ದಾರೆ. ₹100, 50 ಮುಖಬೆಲೆಯ ನೋಟುಗಳ ಪ್ರಮಾಣವೂ ಕಡಿಮೆ ಇರುವುದರಿಂದ ಸ್ಥಳೀಯ ವ್ಯಾಪಾರಿಗಳೂ ಸಹ ಕಾಗದದ ಚೀಟಿ ಪಡೆದು ವಸ್ತುಗಳನ್ನು ನೀಡುತ್ತಿದ್ದಾರೆ.

ಚೀಟಿಯನ್ನು ನೀಡುವವರ ಸಹಿ ಮತ್ತು ಮೊತ್ತವನ್ನು ಕಾಗದ ಒಳಗೊಂಡಿದ್ದು, ಕಿರಾಣಿ ಅಂಗಡಿ ಹಾಗೂ ತರಕಾರಿ ವ್ಯಾಪಾರದಲ್ಲಿಯೂ ಬಳಕೆಯಾಗುತ್ತಿದೆ. ಹೊಸ ನೋಟುಗಳ ಚಲಾವಣೆ ಹೆಚ್ಚಳವಾಗಿ ಸಹಜ ಸ್ಥಿತಿಗೆ ಮರಳಿದ ಬಳಿಕ ಕಾಗದದ ಚೀಟಿಯಲ್ಲಿರುಷ್ಟು ಮೌಲ್ಯದ ಹಣವನ್ನು ವ್ಯಾಪಾರಿಗಳಿಗೆ ನೀಡಲಾಗುತ್ತದೆ.

ಕಾಯುವವರಿಲ್ಲದ ಅಂಗಡಿಗಳು: ಮಿಝೋರಾಂನಲ್ಲಿ ಸಾಮಾನ್ಯವಾಗಿ ಅಂಗಡಿಗಳನ್ನು ಕಾದು ಕೂರುವ ವ್ಯವಸ್ಥೆ ಇಲ್ಲ. ಹಣ್ಣು ಅಥವಾ ತರಕಾರಿಗೆ ಬೆಲೆ ನಿಗದಿ ಪಡಿಸಿದ ಬೋರ್ಡ್‌ ಹಾಕಲಾಗಿರುತ್ತದೆ. ಕೊಳ್ಳುವ ವಸ್ತುವಿಗೆ ತಕ್ಕಷ್ಟು ಹಣವನ್ನು ಅಲ್ಲಿನ ಡಬ್ಬಿಗೆ ಹಾಕಿಬೇಕು. ಚಿಲ್ಲರೆಯನ್ನೂ ಅಲ್ಲಿಂದಲೇ ಪಡೆಯಬಹುದು.

Comments are closed.