ರಾಷ್ಟ್ರೀಯ

ರವಿವಾರದ ರಜಾ ದಿನ ಎಟಿಎಂನಲ್ಲಿ ತಗ್ಗಿದ ಜನರ ಸರತಿ ಸಾಲು!

Pinterest LinkedIn Tumblr

atmನವದೆಹಲಿ: ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಸತತ 11ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಬ್ಯಾಂಕ್ ಗಳಿಗೆ ರಜೆ ಇದ್ದರೂ ಕೆಲ ಎಟಿಎಂಗಳಲ್ಲಿ ಹೊಸ ನೋಟುಗಳು ಲಭ್ಯವಿರುವುದರಿಂದ ಜನರ ಸರತಿ ಸಾಲು ಕಡಿಮೆಯಾದಂತಿದೆ.
ಬೆಂಗಳೂರಿನ ಕೆಲ ಎಟಿಎಂ ಕೇಂದ್ರಗಳನ್ನು ಹೊರತುಪಡಿಸಿ ಬಹುತೇಕ ಎಟಿಎಂಗಳಲ್ಲಿ ಹೊಸ ನೋಟುಗಳು ಮತ್ತು 100 ರು.ನೋಟುಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿರುವುದರಿಂದ ಮತ್ತು ಭಾನುವಾರ ರಜೆಯಾದ್ದರಿಂದ ಎಟಿಎಂಗಳ ಮುಂದಿನ ಜನರ ಸರತಿ ಸಾಲು ಕೊಂಚ ತಗ್ಗಿದಂತೆ ಕಂಡುಬರುತ್ತಿದೆ. ಇನ್ನು ಕೆಲವು ಎಟಿಎಂಗಳು ಹಣವಿಲ್ಲದ ಕಾರಣ ಬಾಗಿಲು ಮುಚ್ಚಿದ್ದು, ಕೆಲ ಪ್ರದೇಶಗಳಲ್ಲಿ ಎಟಿಎಂ ಸೇವೆ ಇಲ್ಲದೇ ಜನ ಭವಣೆ ಪಡುವಂತಾಗಿದೆ.
ಮತ್ತೊಂದು ವಾದದಂತೆ ಎಟಿಎಂಗಳಲ್ಲಿ ಹಣವೇ ದೊರೆಯದ ಕಾರಣ ಜನ ಎಟಿಎಂಗಳ ಬಳಿ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆದರೂ ಹಣದ ಲಭ್ಯತೆ ಇರುವ ಎಟಿಎಂಗಳ ಬಳಿ ಸಾಕಷ್ಟು ಜನ ಸೇರಿದ್ದು, ಸರತಿ ಸಾಲಲ್ಲಿ ನಿಂತು ಹಣ ಪಡೆಯುತ್ತಿದ್ದಾರೆ.
ಆದರೆ ಮಾರುಕಟ್ಟೆಗಳಲ್ಲಿ ಚಿಲ್ಲರೆಗಾಗಿ ಭವಣೆ ಮುಂದುವರೆದಿದ್ದು, ಅಗತ್ಯ ಪ್ರಮಾಣದಲ್ಲಿ ಚಿಲ್ಲರೆ ದೊರೆಯದಿರುವ ಕಾರಣ ವ್ಯಾಪಾರ ಮತ್ತು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವ್ಯಾಪಾರಸ್ಥರು ದೂರಿದ್ದಾರೆ. ಪ್ರಮುಖವಾಗಿ ಹೂ, ತರಕಾರಿ ಮತ್ತು ಹಣ್ಣು ವ್ಯಾಪರದ ಮೇಲೆ ಆರ್ಥಿಕ ಬಿಕ್ಕಟ್ಟಿನ ನೇರ ಪರಿಣಾಮವಾಗುತ್ತಿದ್ದು, ಹಳೆಯ ನೋಟುಗಳ ಬದಲಾವಣೆ ಸಮಸ್ಯೆಯಿಂದಾಗಿ ಹಳೆಯ ನೋಟುಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

Comments are closed.