ರಾಷ್ಟ್ರೀಯ

ರಿಸರ್ವ್ ಬ್ಯಾಂಕ್ ನಿಂದ ನೋಟು ಬದಲಾವಣೆ ಕಾಲಾವಧಿ ವಿಸ್ತರಣೆ

Pinterest LinkedIn Tumblr

rbiಮುಂಬೈ(ನ.19): ಹಳೆ ನೋಟು ಬದಲಿಸಿಕೊಳ್ಳಲು ದೇಶದ ಜನತೆ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಜನತೆಗೆ ಸಮಾಧಾನಕರ ಸುದ್ದಿ ನೀಡಿದೆ.
ನೋಟು ಬದಲಾವಣೆ ಸಮಸ್ಯೆ ಪರಿಷ್ಕಾರಕ್ಕೆ ಮುಂದಾಗಿರುವ ರಿಸರ್ವ್ ಬ್ಯಾಂಕ್ ನೋಟು ಬದಲಾವಣೆಯ ಅಂತಿಮ ದಿನಾಂಕವನ್ನು ನವೆಂಬರ್ 24ರ ಬದಲಿಗೆ ಡಿಸೆಂಬರ್ 30ಕ್ಕೆ ವಿಸ್ತರಿಸಿದೆ.
ಆದರೆ ನೋಟು ಬದಲಾವಣೆ ಮಿತಿ ಒಂದು ಬಾರಿಗೆ 2000 ರು. ಎಂಬ ನಿರ್ಧಾರವನ್ನು ಮುಂದುವರೆಸುವುದಾಗಿ ಆರ್ ಬಿಐ ತಿಳಿಸಿದೆ. ಓರ್ವ ವ್ಯಕ್ತಿ ಒಂದು ಬಾರಿಗೆ 2000 ರು.ಹಣವನ್ನು ಮಾತ್ರ ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಅದಕ್ಕಿಂತಲೂ ಹೆಚ್ಚಿನ ಹಣವನ್ನು ಬದಲಾಯಿಸಿಕೊಳ್ಳುವಂತಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

Comments are closed.