ರಾಷ್ಟ್ರೀಯ

ಸುಷ್ಮಾಗೆ ಕಿಡ್ನಿ ನೀಡಲು ಮುಂದಾಗಿರುವ ಮುಸ್ಲಿಂ ವ್ಯಕ್ತಿ

Pinterest LinkedIn Tumblr

sushmaನವದೆಹಲಿ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕಿಡ್ನಿ ನೀಡಲು ಜನರು ನಾ ಮುಂದು ತಾ ಮುಂದು ಎಂದು ಸಿದ್ಧರಾಗಿದ್ದಾರೆ. ಈ ನಡುವೆ ಸುಷ್ಮಾ ಸ್ವರಾಜ್ ಅವರಿಗೆ ಮುಸ್ಲಿಂ ವ್ಯಕ್ತಿಯೊಬ್ಬ ಕಿಡ್ನಿ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಬಿಎಸ್ ಪಿ ಬೆಂಬಲಿಗರಾಗಿರುವ ಉತ್ತರ ಪ್ರದೇಶದ ಮುಜೀಬ್ ಅನ್ಸಾರಿ, ನಾನು ಮುಸ್ಲಿಂ ಆಗಿದ್ದು, ಬಿಎಸ್ ಪಿ ಬೆಂಬಲಿಗನಾಗಿದ್ದೇನೆ, ಆದರೆ ನಿಮಗೆ ಕಿಡ್ನಿ ನೀಡಲು ಸಿದ್ಧನಿದ್ದೇನೆ ನೀವು ನನ್ನ ತಾಯಿ ಇದ್ದಂತೆ. ಅಲ್ಲಾ ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಸಹೋದರರಿಗೆ ಧನ್ಯವಾದಗಳು, ಕಿಡ್ನಿಗೆ ಧಾರ್ಮಿಕ ಗುರುತುಪಟ್ಟಿಗಳಿಲ್ಲ ಎಂದು ಹೇಳಿದ್ದಾರೆ.

ಮುಜೀಬ್ ಅನ್ಸಾರಿಯಂತೆಯೇ ಮತ್ತೋರ್ವ ಮುಸ್ಲಿಂ ನ್ಯಾಮತ್ ಅಲಿ ಶೇಖ್ ಎಂಬುವವರೂ ಸಹ ಸುಷ್ಮಾ ಸ್ವರಾಜ್ ಗೆ ಮೂತ್ರ ಪಿಂಡ ದಾನ ಮಾಡಲು ಸಿದ್ಧವಿರುವುದಾಗಿ ತಿಳಿಸಿದ್ದರು. ಇದಕ್ಕೂ ಮುನ್ನ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ಅಹ್ಮರ್ ಮುಸ್ತಿಖಾನ್ ಸಹ ಕಿಡ್ನಿ ನೀಡಲು ಸಿದ್ಧವಿರುವುದಾಗಿ ಹೇಳಿದ್ದರು.

Comments are closed.