ರಾಷ್ಟ್ರೀಯ

ಬ್ಯಾಂಕಿನಲ್ಲಿ ಶಾಯಿ ಬಳಕೆಗೆ ಚುನಾವಣಾ ಆಯೋಗ ಆಕ್ಷೇಪ

Pinterest LinkedIn Tumblr

inkನವದೆಹಲಿ: ನೋಟು ಬದಲಾವಣೆ ವೇಳೆ ಬ್ಯಾಂಕ್‌ಗಳಲ್ಲಿ ಜನರ ಕೈ ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚುತ್ತಿರುವುದನ್ನು ನಿಲ್ಲಿಸಬೇಕು ಎಂದು ಚುನಾವಣಾ ಆಯೋಗ ಶುಕ್ರವಾರ ಸರ್ಕಾರಕ್ಕೆ ಹೇಳಿದೆ.

ಈ ಸಂಬಂಧ ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿರುವ ಚುನಾವಣಾ ಆಯೋಗ, ಐದು ರಾಜ್ಯಗಳಲ್ಲಿ ಉಪ ಚುನಾವಣೆ ಇರುವುದರಿಂದ ಅಳಿಸಲಾಗದ ಶಾಯಿ ಬಳಸಬಾರದು. ಶಾಯಿ ಹಾಕುವುದರಿಂದ ಮತದಾನದ ವೇಳೆ ಗೊಂದಲಗಳು ಉಂಟಾಗುತ್ತವೆ ಎಂದು ಹೇಳಿದೆ.

₹500, 1,000 ಮುಖಬೆಲೆಯ ನೋಟುಗಳ ಬದಲಾವಣೆ ವೇಳೆ ಬ್ಯಾಂಕ್‌ಗಲ್ಲಿ ಒತ್ತಡ ಕಡಿಮೆ ಮಾಡಲು ಹಾಗೂ ವ್ಯಕ್ತಿಯೊಬ್ಬ ಹಲವು ಬಾರಿ ನೋಟು ಬದಲಾವಣೆಗೆ ಬರುತ್ತಿರುವುದನ್ನು ತಪ್ಪಿಸಲು ಮತ್ತು ಕಪ್ಪು ಹಣವನ್ನು ಅನ್ಯ ವ್ಯಕ್ತಿಗಳ ಮೂಲಕ ಬದಲಾವಣೆ ಮಾಡುವುದಕ್ಕೆ ತಡೆಯೊಡ್ಡಲು ಬಲಗೈ ಹೆಬ್ಬೆರೆಳಿಗೆ ಶಾಯಿ ಹಾಕುವ ಕ್ರಮ ಜಾರಿ ಮಾಡಲಾಗಿತ್ತು.

Comments are closed.