ರಾಷ್ಟ್ರೀಯ

2000 ರೂ.ನ ನಕಲಿ ನೋಟ್ ಮುದ್ರಣ; ಇಬ್ಬರ ಬಂಧನ

Pinterest LinkedIn Tumblr

fake-notesಅಮೃತಸರ್: ಇನ್ನು ಕೂಡ ಹಲವರಿಗೆ ಹೊಸ 2,000 ರೂಪಾಯಿ ನೋಟುಗಳ ಪರಿಚಯವಾಗಿಲ್ಲದಿರುವ ಲಾಭ ಪಡೆದುಕೊಳ್ಳಲು ಯೋಜಿಸಿದ ಕಂಪ್ಯೂಟರ್ ಆಪರೇಟರ್‌ ಒಬ್ಬ ಸ್ಕ್ಯಾನರ್ ಮತ್ತು ಮುದ್ರಕಗಳನ್ನು ಬಳಸಿ ನಕಲಿ ನೋಟುಗಳನ್ನು ಉತ್ಪಾದಿಸಿದ್ದಾನೆ. ಪಂಜಾಬ್‌ನಲ್ಲಿ ಈ ಘಟನೆ ನಡೆದಿದ್ದು ಆರೋಪಿ ಮತ್ತು ಆತನಿಗೆ ಸಹಕರಿಸಿದವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಭಿಖಿವಿಂಡ್ ನಗರದ ಸಂದೀಪ್ ಕುಮಾರ್ ಮತ್ತು ಹರ್ಜೀಂದರ್ ಸಿಂಗ್ ಎಂದು ಗುರುತಿಸಲಾಗಿದ್ದು ಮತ್ತೊಬ್ಬ ಆರೋಪಿ ಗುರ್ಮಿಲಪ್ ಸಿಂಗ್ ಮಾತ್ರ ತಲೆ ಮರೆಸಿಕೊಂಡಿದ್ದಾನೆ.

ಜನರಿಗೆ ಹೊಸ ನೋಟಿನ ಪರಿಚಯ ಹೆಚ್ಚು ಇಲ್ಲವಾದ್ದರಿಂದ ಸುಲಭವಾಗಿ ವಂಚಿಸಬಹುದು ಎಂಬುದು ಆರೋಪಿಗಳ ಲೆಕ್ಕಾಚಾರವಾಗಿತ್ತು. ಸಂದೀಪ್ ಝೆರಾಕ್ಸ್ ಅಂಗಡಿಯನ್ನು ನಡೆಸುತ್ತಿದ್ದು, ಇಲ್ಲಿಯೇ ಮೂವರು ಆರೋಪಿಗಳು ನಕಲಿ ನೋಟನ್ನು ಮುದ್ರಿಸಿದ್ದರು. ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.