ನವದೆಹಲಿ: ವಿವಾದಿತ ಧರ್ಮ ಪ್ರಚಾರಕ ಜಾಕೀರ್ ನಾಯ್ಕ್ ನೇತೃತ್ವದ ಎನ್ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಅನ್ನು ಭಯೋತ್ಪಾದನೆ ನಿಗ್ರಹ ಕಾನೂನಿನಡಿ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧ ಹೇರಿದೆ.
ಈ ಫೌಂಡೇಷನ್ ಸಂಸ್ಥೆಯನ್ನು ನಿಷೇಧಿತ ಸಂಘಟನೆ ಎಂದು ಘೋಷಿಸುವಂತೆ ಇದೇ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವಾಲಯವು ಸಂಪುಟ ಸಭೆಗೆ ಟಿಪ್ಪಣಿ ಕಳುಹಿಸಿತ್ತು. ವಿದೇಶಿ ದೇಣಿಗೆ ಪಡೆಯುವ ಪರವಾನಗಿ ರದ್ದುಗೊಳಿಸುವ ಪ್ರಕ್ರಿಯೆಯನ್ನು ನವೆಂಬರ್ ತಿಂಗಳ ಆರಂಭದಲ್ಲಿ ಸಚಿವಾಲಯ ಕೈಗೆತ್ತಿಕೊಂಡಿತ್ತು.
ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಆರೋಪದಡಿ ಪೀಸ್ ಟಿವಿ ಜತೆ ಜತೆ ಜಾಕೀರ್ ನಾಯ್ಕೆ ಸಂಸ್ಥೆ ನಂಟು ಹೊಂದಿದೆ ಎಂಬ ಆರೋಪವಿದೆ.
ಜಾಕೀರ್ ನಾಯ್ಕ್ ಅವರ ಬೋಧನೆಯಿಂದ ಪ್ರೇರಿತರಾಗಿದ್ದೇವೆ ಎಂದು ಕೆಲ ಬಾಂಗ್ಲಾ ಭಯೋತ್ಪಾದಕರು ಹೇಳಿಕೊಂಡ ಬಳಿಕ ಜಾಕೀರ್ ಪ್ರಚೋದನಾಕಾರಿ ಭಾಷಣಗಳ ಮೇಲೆ ನಿಗಾ ಇಡಲಾಗಿತ್ತು.