ರಾಷ್ಟ್ರೀಯ

ಎಟಿಎಂಗೆ ತುಂಬಿಸಲು ನೀಡಿದ್ದ 6.98 ಲಕ್ಷ ಮೌಲ್ಯದ ಹೊಸ ನೋಟುಗಳೊಂದಿಗೆ ಪರಾರಿಯಾದ ಬ್ಯಾಂಕ್ ನೌಕರ !

Pinterest LinkedIn Tumblr

atm

ಮೊಹಾಲಿ: ಎಟಿಎಂಗೆ ಹಾಕಲು ನೀಡಲಾಗಿದ್ದ ಸುಮಾರು 6.98 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಬ್ಯಾಂಕರ್ ಓರ್ವ ಕದ್ದು ಪರಾರಿಯಾಗಿರುವ ಘಟನೆ ಪಂಜಾಬ್ ಮೊಹಾಲಿಯಲ್ಲಿ ನಡೆದಿದೆ.

ದೇಶಾದ್ಯಂತ ಹೊಸ ನೋಟುಗಳಿಗೆ ಜನತೆ ಭವಣೆ ಪಡುತ್ತಿರುವಂತೆಯೇ ಇತ್ತ ಮೊಹಾಲಿಯಲ್ಲಿ ಬ್ಯಾಂಕ್ ನೌಕರನೋರ್ವ ಎಟಿಎಂಗೆ ತುಂಬಿಸಲು ನೀಡಲಾಗಿದ್ದ ಹಣದೊಂದಿಗೆ ಪರಾರಿಯಾಗಿದ್ದಾನೆ. ಪರಾರಿಯಾದ ಬ್ಯಾಂಕ್ ನೌಕರನನ್ನು ಪಂಜಾಬ್ ಮತ್ತು ಸಿಂದ್ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ತೇಜ್ ಪ್ರತಾಪ್ ಸಿಂಗ್ ಭಾಟಿಯಾ ಎಂದು ಗುರುತಿಸಲಾಗಿದೆ. ಮೊಹಾಲಿ ಜಿಲ್ಲೆಯ ಡೆರಬಾಸ್ಸಿ ತಾಲ್ಲೂಕಿನ ಬಂಕಾರ್ಪುರ್ ಹಳ್ಳಿಯಲ್ಲಿ ಎಟಿಎಂಗೆ ಹಣ ತುಂಬಿಸುವಂತೆ ನೀಡಲಾಗಿದ್ದ ಸುಮಾರು 6.98 ಲಕ್ಷ ಮೌಲ್ಯದ ಹಣವನ್ನು ತೇಜ್ ಪ್ರತಾಪ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಎಟಿಎಂಗೆ ಹಣ ತುಂಬಿಸುವ ಪ್ರಕ್ರಿಯೆ ವೇಳೆ ವೀಕ್ಷಣೆ ಮಾಡಲು ತೇಜ್ ಪ್ರತಾಪ್ ನನ್ನು ನೇಮಿಸಲಾಗಿತ್ತು. ಈ ವೇಳೆ ಓರ್ವ ಭದ್ರತಾ ಅಧಿಕಾರಿ, ಓರ್ವ ಇಂಜಿನಿಯರ್ ನೊಂದಿಗೆ ಎಟಿಎಂಗೆ ಆಗಮಿಸಿದ ತೇಜ್ ಪ್ರತಾಪ್ ಇಂಜಿನಿಯರ್ ಎಟಿಎಂ ತೆರೆಯುತ್ತಿರುವಾಗ ಭದ್ರತಾ ಸಿಬ್ಬಂದಿ ಆತನಿಗೆ ಸಹಾಯ ಮಾಡುತ್ತಿದ್ದ. ಇದನ್ನೇ ತನ್ನ ದುಷ್ಕ್ಕೃತ್ಯಕ್ಕೆ ಬಳಸಿಕೊಂಡ ತೇಜ್ ಪ್ರತಾಪ್ ಸಿಬ್ಬಂದಿಗಳು ಕೆಲಸದಲ್ಲಿ ಮಗ್ನರಾಗಿದ್ದಾಗ ಹಣದ ಬಾಕ್ಸ್ ನೊಂದಿಗೆ ತನ್ನ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕಳ್ಳ ಬ್ಯಾಂಕರ್ ವಿರುದ್ಧ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಆಡಳಿತ ಮಂಡಳಿ ಡೆರಬಸ್ಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.