ರಾಷ್ಟ್ರೀಯ

ತನ್ನ 4 ತಿಂಗಳ ಗರ್ಭಿಣಿ ಹೆಂಡತಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಪತಿ

Pinterest LinkedIn Tumblr

hus

ವಿಜಯಪುರ: ವ್ಯಕ್ತಿಯೊಬ್ಬ ತನ್ನ 4 ತಿಂಗಳ ಗರ್ಭಿಣಿ ಹೆಂಡತಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಪರಸಪ್ಪ ಎಂಬಾತ ಕೃತ್ಯ ಎಸಗಿದ್ದು 4 ತಿಂಗಳ ಗರ್ಭಿಣಿಯಾಗಿದ್ದ ಯಮುನವ್ವ (30) ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. 90 ಶೇಕಡಾ ಸುಟ್ಟಗಾಯಗಳಿಗೊಳಗಾಗಿರುವ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಸಪ್ಪನಿಗಾಗಿ ಶೋಧ ನಡೆಸುತ್ತಿದ್ದಾರೆ.

Comments are closed.