ನವದೆಹಲಿ: ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ‘ನೋಟು ರದ್ದು’ ಆದೇಶ ಪ್ರಕಟ ಮಾಡಿದ ನಂತರ ದೇಶದಾದ್ಯಂತವಿರುವ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಮೋದಿ ‘ದುರಹಂಕಾರ’ ಬಿಟ್ಟು ತಮ್ಮ ನಿರ್ಧಾರವನ್ನು ವಾಪಸ್ ಪಡೆಯಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ನಿರ್ಧಾರ ವಾಪಸ್ ಪಡೆಯಲು ಇನ್ನೂ ಸಮಯವಿದೆ. ಕಾನೂನು ಕೈ ಜಾರಿ ಹೋಗುವ ಮುನ್ನ ನಿಮ್ಮ ನಿರ್ಧಾರವನ್ನು ವಾಪಸ್ ಪಡೆಯಿರಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಭಾನುವಾರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ, ಗರಿಷ್ಠ ಮುಖಬೆಲೆಯ ನೋಟುಗಳನ್ನು ಮೋದಿ ಸರ್ಕಾರ ರದ್ದು ಮಾಡಿದ ನಂತರ ಸಾಮಾನ್ಯ ಜನರು ಭಯಭೀತರಾಗಿದ್ದಾರೆ.
ಗೋವಾದಲ್ಲಿ ಭಾಷಣ ಮಾಡಿದ ಮೋದಿ, ಸದ್ಯದ ಪರಿಸ್ಥಿತಿ 50 ದಿನಗಳವರಗೆ ಮುಂದುವರಿಯಲಿದೆ. ಅಲ್ಲಿಯವರೆಗೆ ಸಹಕರಿಸಿ ಎಂದು ದೇಶದ ಜನತೆಯಲ್ಲಿ ಮನವಿ ಮಾಡಿದ್ದರು. ಅದೇ ವೇಳೆ ದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದವರೀಗ ₹4000 ಹಣ ಪಡೆಯಲು ದೊಡ್ಡ ಸಾಲುಗಳಲ್ಲಿ ನಿಂತಿದ್ದಾರೆ ಎಂದಿದ್ದರು.
ಮೋದಿಯವರ ಭಾಷಣದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಕೇಜ್ರಿವಾಲ್, ಮೋದಿಯವರು ಜನರನ್ನು ಅಣಕ ಮಾಡಿದ್ದಾರೆ. ಆದ್ದರಿಂದ ಅವರು ಕ್ಷಮೆ ಕೇಳಲೇ ಬೇಕು. ಮೋದಿಯ ಭಾಷಣ ಕೇಳಿ ಜನರು ಹೆದರಿದ್ದಾರೆ. ನನಗೆ ಹಲವಾರು ಕರೆಗಳೂ ಬಂದಿವೆ.
ದೊಡ್ಡ ಹಗರಣದಲ್ಲಿ ಭಾಗಿಯಾಗಿದ್ದವರೀಗ ₹4000 ಹಣ ಪಡೆಯಲು ದೊಡ್ಡ ಸಾಲುಗಳಲ್ಲಿ ನಿಂತಿದ್ದಾರೆ ಎಂದು ಮೋದಿ ಹೇಳಿರುವುದು ಸರತಿ ಸಾಲಿನಲ್ಲಿ ನಿಂತಿರುವ ಜನರಿಗೆ ಮಾಡಿದ ದೊಡ್ಡ ಅವಮಾನ ಎಂದು ಟ್ವೀಟ್ ಮಾಡಿದ್ದಾರೆ.
Follow
Arvind Kejriwal ✔ @ArvindKejriwal
This is the biggest insult to the people standing in queues. https://twitter.com/ani_news/status/797702425784172544 …
2:20 PM – 13 Nov 2016
1,951 1,951 Retweets 1,770 1,770 likes
ಮೋದಿಯವರಿಗೆ ಕಾರ್ಪೊರೇಟ್ ಕುಳಗಳು ಸ್ನೇಹಿತರಿದ್ದಾರೆ ಎಂದು ಆರೋಪಿಸಿದ ದೆಹಲಿ ಮುಖ್ಯಮಂತ್ರಿ, ಒಂದು ವೇಳೆ ಮೋದಿಯವರು ಕಪ್ಪುಹಣ ಹೋಗಲಾಡಿಸಲು ಗಂಭೀರ ಕ್ರಮ ಕೈಗೊಳ್ಳುವುದಾದರೆ, ಅವರು ತಮ್ಮ ಕಾರ್ಪೊರೇಟ್ ಗೆಳೆಯರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದಾರೆ.