ರಾಷ್ಟ್ರೀಯ

₹500, 1000 ನೋಟು ಚಲಾವಣೆ ಬಂದ್; ಪ್ರಧಾನಿ ಮೋದಿ ಘೋಷಣೆ

Pinterest LinkedIn Tumblr

new-notes

ನವದೆಹಲಿ: ಇಂದು (ಮಂಗಳವಾರ) ಮಧ್ಯರಾತ್ರಿಯಿಂದ ₹500, 1000 ನೋಟುಗಳ ಮುದ್ರಣ ಮತ್ತು ಚಲಾವಣೆ ರದ್ದಾಗಲಿದೆ. ₹500 ಹಾಗೂ ₹2000 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು.

ಮಧ್ಯರಾತ್ರಿಯಿಂದಲೇ ₹500, ₹1000 ನೋಟುಗಳು ರದ್ದಾಗಲಿವೆ. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕಪ್ಪು ಹಣ ಮತ್ತು ನಕಲಿ ಹಣಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ನಾಳೆ ದೇಶದ ಯಾವುದೇ ಬ್ಯಾಂಕ್‌ ಕಾರ್ಯನಿರ್ವಹಿಸುವುದಿಲ್ಲ ಹಾಗೂ ನವೆಂಬರ್‌ 9 ಮತ್ತು ನವೆಂಬರ್‌ 10ರಂದು ಎಟಿಎಂ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಒಟ್ಟು 50 ದಿನಗಳೊಳಗಾಗಿ ನೋಟು ವಾಪಾಸು ಕೊಡಬಹುದಾಗಿದೆ. ಪ್ರತಿದಿನ ₹4 ಸಾವಿರ ವರೆಗೂ ಬದಲಿಸಿಕೊಳ್ಳಲು ಅವಕಾಶವಿದೆ.

ಆಸ್ಪತ್ರೆ ಮತ್ತು ರೈಲು ಬುಕ್ಕಿಂಗ್‌ಗಾಗಿ ನವೆಂಬರ್‌ 11ರವೆಗೂ ಈ ನೋಟುಗಳ ಬಳಸಬಹುದಾಗಿದೆ.

₹2000 ಮತ್ತು ₹500 ಹೊಸ ನೋಟುಗಳು ನವೆಂಬರ್‌ 10ರಿಂದ ಚಾಲ್ತಿಗೆ ಬರಲಿವೆ. ಆಧಾರ್ ಕಾರ್ಡ್‌ ಸೇರಿದಂತೆ ಸೂಕ್ತ ಗುರುತಿನ ಚೀಟಿ ತೋರಿಸಿ ಬ್ಯಾಂಕ್‌ ಮತ್ತು ಅಂಚೆ ಕಚೇರಿಯಲ್ಲಿ ನೋಟು ಬದಲಿಸಿಕೊಳ್ಳಬಹುದು. ನಗದು ರಹಿತ ವ್ಯವಹಾರಗಳಿಗೆ ಯಾವುದೇ ತೊಂದರೆ ಇಲ್ಲ.

ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾನ ಕಾರ್ಡ್ ಕೊಟ್ಟು ನೋಟನ್ನು ಬದಲಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಡಿಸೆಂಬರ್ 31ರವರೆಗೆ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಅಫಿಡವಿಟ್ ಸಲ್ಲಿಸಿ 2017ರ ಮಾರ್ಚ್ ವರೆಗೂ ರಿಸರ್ವ್ ಬ್ಯಾಂಕ್ ಗಳಲ್ಲಿ ನೋಟುಗಳನ್ನು ಬದಲಿಸಿಕೊಳ್ಳಬಹುದಾಗಿದೆ. ಇನ್ನು ದಿನಕ್ಕೆ ಬರೀ 2 ಸಾವಿರ ಮೊತ್ತದ ನೋಟುಗಳನ್ನು ಬದಲಿಸಿಕೊಳ್ಳಬಹುದು.

ಇನ್ನು ನೂತನವಾಗಿ 2000 ಹಾಗೂ 500 ಮುಖಬೆಲೆಯ ನೋಟುಗಳ ಮುದ್ರಣಕ್ಕೆ ಅವಕಾಶ ನೀಡಲಾಗಿದ್ದು ಮುಂದಿನ ದಿನಗಳಲ್ಲಿ 500 ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ. 500-1000 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಬಂದ್ ಹಿನ್ನೆಲೆ 1 ರುಪಾಯಿಯಿಂದ 100 ರುಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಾಗಲಿವೆ.

Comments are closed.