ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ವಿಕಾಸ ರಥ ಯಾತ್ರೆಗೆ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಗುರುವಾರ ಚಾಲನೆ ನೀಡಿದರು.
ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬ ಕಲಹ ಶಮನವಾಗದಿದ್ದರೂ ಪುತ್ರ ಅಖಿಲೇಶ್ ಯಾದವ್ ನಡೆಸುತ್ತಿರುವ ವಿಕಾಸ ರಥ ಯಾತ್ರೆಗೆ ಚಾಲನೆ ನೀಡುವ ಮೂಲಕ ಮುಲಾಯಂ ಸಿಂಗ್ ಯಾದವ್ ಅಚ್ಚರಿ ಮೂಡಿಸಿದ್ದಾರೆ.
72 ಕಿ. ಮೀಟರ್‌ಗಳ ಈ ರಥ ಯಾತ್ರೆ ಅಖಿಲೇಶ್ ಸಿಂಗ್ ಯಾದವ್ ನೇತೃತ್ವದಲ್ಲಿ ನಡೆಯಲಿದೆ. ಪ್ರತಿ 2 ಕಿ. ಮೀಟರ್‌ಗೆ ರಥ ಯಾತ್ರೆಯನ್ನು ನಿಲ್ಲಿಸಿ ಜನರನ್ನು ಉದ್ದೇಶಿಸಿ ಅಖಿಲೇಶ್ ಮಾತನಾಡಲಿದ್ದಾರೆ.
ಈ ರಥ ಯಾತ್ರೆ ಲಖನೌದಿಂದ ಉನಾ ವರೆಗೂ ತೆರಳಲಿದೆ.