ಕರ್ನಾಟಕ

ಪೆಟ್ರೋಲ್ ಡೀಲರ್’ಗಳ ಬೇಡಿಕೆಗಳೇನು?

Pinterest LinkedIn Tumblr

petrolಬೆಂಗಳೂರು(ನ. 03): ಪೆಟ್ರೋಲಿಯಮ್ ಡೀಲರ್’ಗಳ ಮುಷ್ಕರ ದೇಶಾದ್ಯಂತ ಬಿಸಿ ಮೂಡಿಸಿದೆ. ನವೆಂಬರ್ 3 ಮತ್ತು 4ರಂದು ದೇಶದ ಹಲವೆಡೆ ಪೆಟ್ರೋಲ್ ಬಂಕ್’ಗಳು ವಹಿವಾಟು ನಿಲ್ಲಿಸಿವೆ. ವಿವಿಧ ಬೇಡಿಕೆಗಳನ್ನು ಮುಂದಿಟ್ಟಿರುವ ಪೆಟ್ರೋಲಿಯಮ್ ಡೀಲರ್’ಗಳ ಪ್ರತಿನಿಧಿಗಳು ಇಂದು ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿವೆ. ಡೀಲರ್’ಗಳ ಬೇಡಿಕೆ ಮತ್ತು ಪ್ರತಿಭಟನೆಗಳ ಕುರಿತು ಒಂದು ಸ್ಥೂಲ ನೋಟ ಇಲ್ಲಿದೆ.
ಪೆಟ್ರೋಲ್ ಡೀಲರ್’ಗಳ ಪ್ರತಿಭಟನೆ:
* ನವೆಂಬರ್ 3 ಮತ್ತು 4ರಂದು ತೈಲ ಕಂಪನಿಗಳಿಂದ ಯಾವುದೇ ಪೆಟ್ರೋಲ್ ಮತ್ತು ಡೀಸೆಲ್’ಗಳ ಖರೀದಿ ಇಲ್ಲ. ಪೆಟ್ರೋಲ್ ಸ್ಟಾಕ್ ಇರುವವರೆಗೂ ಮಾರಾಟ ಇರುತ್ತದೆ.
* ನವೆಂಬರ್ 15ರಂದು ದೇಶಾದ್ಯಂತ ಪೆಟ್ರೋಲ್ ಬಂದ್
* ಕಳೆದ ತಿಂಗಳು, ಅ. 19 ಮತ್ತು 26ರಂದು ಸಂಜೆ 7ರಿಂದ 15 ನಿಮಿಷಗಳ ಕಾಲ ಪೆಟ್ರೋಲ್ ಬಂದ್ ಮಾಡಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗಿತ್ತು.
* ನವೆಂಬರ್ 5ರಿಂದ ಬೇಡಿಕೆ ಈಡೇರುವವರೆಗೂ ಪೆಟ್ರೋಲ್ ಬಂಕ್’ಗಳು ಬೆಳಗ್ಗೆ 9ರಿಂದ ಸಂಜೆ 6ರವರೆಗಷ್ಟೇ ಕಾರ್ಯನಿರ್ವಹಿಸಲಿವೆ.
* ಎಲ್ಲಾ ಭಾನುವಾರಗಳು ರಜೆ; ತಿಂಗಳ ಎರಡು ಮತ್ತು ಮೂರನೇ ಶನಿವಾರಗಳಂದೂ ಪೆಟ್ರೋಲ್ ಬಂಕ್ ಮುಚ್ಚಿರುತ್ತವೆ.
* ದೇಶಾದ್ಯಂತ 53,500 ಪೆಟ್ರೋಲ್ ಪಂಪ್’ಗಳು ಮುಷ್ಕರದಲ್ಲಿ ತೊಡಗಿವೆ.
* ರಿಲಯನ್ಸ್, ಎಸ್ಸಾರ್ ಮೊದಲಾದ ಖಾಸಗಿ ಪೆಟ್ರೋಲ್ ಪಂಪ್’ಗಳು ಮುಷ್ಕರದಲ್ಲಿ ತೊಡಗಿಲ್ಲ; ಅಲ್ಲಿ ಪೆಟ್ರೋಲ್ ಲಭ್ಯವಿರಲಿದೆ.
ಡೀಲರ್’ಗಳ ಬೇಡಿಕೆಗಳೇನು?
* ಲಾಭಾಂಶದಲ್ಲಿ ಏರಿಕೆ ಆಗಬೇಕು; ಈಗಿರುವ 3% ಬದಲು 5%ಗೆ ಲಾಭದ ಮಾರ್ಜಿನ್ ಏರಿಸಬೇಕು. ಸದ್ಯಕ್ಕೆ ಲೀಟರ್ ಪೆಟ್ರೋಲ್’ಗೆ 2.42 ರೂ. ಹಾಗೂ ಡೀಸೆಲ್’ಗೆ ಸುಮಾರು 1.49 ರೂ ಕಮಿಷನ್ ಸಿಗುತ್ತಿದೆ.
* ಕಳೆದ 5 ವರ್ಷದಿಂದ ಪೆಟ್ರೋಲ್ ಡೀಲರ್’ಗಳಿಗೆ ನಷ್ಟವಾಗುತ್ತಿದೆ. ಸದ್ಯ ನೀಡಲಾಗುತ್ತಿರುವ ಕಮಿಷನ್’ನಿಂದ ಮೈಂಟೆನೆನ್ಸ್’ಗೆ ಮಾತ್ರ ಸರಿಹೋಗುತ್ತದೆ. ಲಾಭ ಸಿಗುತ್ತಿಲ್ಲ.
* ಪೆಟ್ರೋಲ್’ನಲ್ಲಿ ಇಥೆನಾಲ್ ಮಿಶ್ರ ಮಾಡುವ ಪ್ರಮಾಣವನ್ನು 10%ರಿಂದ 22.50%ಗೆ ಸದ್ಯಕ್ಕೆ ಏರಿಕೆ ಮಾಡಬಾರದು.
* ಇಥೆನಾಲ್ ಬ್ಲೆಂಡ್ ಆದ ಪೆಟ್ರೋಲ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ತೈಲ ಕಂಪನಿಗಳು ಮಾಡಬೇಕು.
* ಟ್ರಾನ್ಸ್’ಪೋರ್ಟ್ ಟೆಂಡರ್ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು
* ಪೆಟ್ರೋಲ್ ಆವಿ(Evaporation)ಯಾಗುವ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕು.

Comments are closed.