ರಾಷ್ಟ್ರೀಯ

ಭೋಪಾಲ್ ಜೈಲಿನಿಂದ ಸಿಮಿ ಸಂಘಟನೆಯ 8 ಉಗ್ರರು ಪರಾರಿ

Pinterest LinkedIn Tumblr

7

ಭೋಪಾಲ್: ಇಲ್ಲಿನ ಕೇಂದ್ರೀಯ ಕಾರಾಗೃಹದಿಂದ ಸಿಮಿ ಸಂಘಟನೆಯ 8 ಜನ ಉಗ್ರರು ಭದ್ರತಾ ಸಿಬ್ಬಂದಿಯೊಬ್ಬರನ್ನು ಹತ್ಯೆ ಮಾಡಿ ಜೈಲಿನಿಂದ ಪರಾರಿಯಾಗಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಉಗ್ರರು ಪರಾರಿ ಪ್ರಕರಣ ಸಂಬಂಧ ಜೈಲು ಅಧೀಕ್ಷಕ ಸೇರಿದಂತೆ ಐವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಮತ್ತು ಉಗ್ರರ ಪತ್ತೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಮಧ್ಯಪ್ರದೇಶ ಗೃಹ ಸಚಿವ ಭುಪೇಂದ್ರ ಸಿಂಗ್ ಅವರು ತಿಳಿಸಿದ್ದಾರೆ.

ಜೈಲಿನಿಂದ ತಪ್ಪಿಸಿಕೊಂಡಿರುವ ಉಗ್ರರು ನಿಷೇಧಿತ ಸಿಮಿ (ಸ್ಟೂಡೆಂಟ್ಸ್ ಆಫ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ) ಸಂಘಟನೆಗೆ ಸೇರಿದವರು ಎಂದು ಪೊಲೀಸರು ಖಚಿತಪಡಿಸಿದ್ದಾರೆ

ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿ ರಮಾಶಂಕರ್‌ ಎಂಬುವರನ್ನು ಚಾಕುನಿಂದ ಹಿರಿದು ಕೊಂದಿದ್ದಾರೆ. ನಂತರ ತಮ್ಮ ಬೆಡ್‌ ಶೀಟ್‌ಗಳ ಸಹಾಯದಿಂದ ಜೈಲಿನ ಗೋಡೆಯನ್ನು ಹಾರಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಹಿರಿಯ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಉಗ್ರರ ಪತ್ತೆಗೆ ಹಲವು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Comments are closed.