ರಾಷ್ಟ್ರೀಯ

ನಕಲಿ ನೋಟುಗಳ ಹಾವಳಿ : ನೋಟು ಸ್ವೀಕರಿಸುವ ಮುನ್ನ ಪರೀಕ್ಷಿಸಲು ಜನತೆಗೆ ಆರ್ಬಿಐ ಸೂಚನೆ.

Pinterest LinkedIn Tumblr

fake-note

ದೆಹಲಿ : ದೇಶದ ಎಲ್ಲಡೆ ನಕಲಿ ನೋಟುಗಳ ಹಾವಳಿ ಹೆ಼ಚ್ಚಾಗಿರುವುದರಿಂದ ನೋಟುಗಳನ್ನು ಸ್ವೀಕರಿಸುವ ಮುನ್ನ ಅವುಗಳನ್ನು ಪರೀಕ್ಷಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಜನತೆಗೆ ಆರ್ಬಿಐ ಸೂಚಿಸಿದೆ.

500 ರೂ.ಮತ್ತು 1000 ರೂ.ಮುಖಬೆಲೆಯ ನಕಲಿ ನೋಟುಗಳ ಹಾವಳಿಯಿಂದ ಕಳವಳಗೊಂಡಿರುವ ಆರ್ಬಿಐ ಈ ಮುಖಬೆಲೆಗಳ ನೋಟುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ತಿಳಿಸಿರುವ ಬ್ಯಾಂಕು, ಹೆಚ್ಚಿನ ಮುಖಬೆಲೆಯ ಸಾಚಾ ನೋಟುಗಳು ಸುಲಭದಲ್ಲಿ ನಕಲು ಮಾಡಲಾಗದ ಭದ್ರತಾ ಲಕ್ಷಣಗಳನ್ನು ಹೊಂದಿವೆ ಮತ್ತು ಸೂಕ್ಷ್ಮ ಪರಿಶೀಲನೆಯ ಮೂಲಕ ನಕಲಿ ನೋಟುಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಹೇಳಿದೆ.

ಕರೆನ್ಸಿ ನೋಟುಗಳಲ್ಲಿಯ ಭದ್ರತಾ ಅಂಶಗಳ ಬಗ್ಗೆ ವಿವರವಾದ ಮಾಹಿತಿಗಳು ಆರ್ಬಿಐನ ವೆಬ್ಸೈಟ್ನಲ್ಲಿ ಲಭ್ಯವಿವೆ. ಹೆಚ್ಚಿನ ಸಂಖ್ಯೆಯಲ್ಲಿ ನೋಟುಗಳ ಬಳಕೆಗೆ ಹೆಚ್ಚುವರಿ ಗುರುತಿನ ಅಗತ್ಯವನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಆರ್ಬಿಐ ಪರಿಶೀಲಿಸುತ್ತಿದೆ.

ನಕಲಿ ನೋಟುಗಳ ಹಾವಳಿಯನ್ನು ಹತ್ತಿಕ್ಕುವಲ್ಲಿ ಸಹಕರಿಸುವಂತೆ ಅದು ಜನರನ್ನು ಮತ್ತು ಅಧಿಕಾರಿಗಳನ್ನು ಕೋರಿಕೊಂಡಿದೆ

Comments are closed.