ರಾಷ್ಟ್ರೀಯ

ಸುಖಕರ ರೈಲ್ವೆ ಪಯಣಕ್ಕೆ ವಿನೂತನ ಆಪ್

Pinterest LinkedIn Tumblr

indian-railwaysನವದೆಹಲಿ: ಭಾರತೀಯ ರೈಲ್ವೆಯನ್ನು ಆಧುನಿಕಗೊಳಿಸಲು ಮುಂದಾಗಿರುವ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಆಪ್ ಅಭಿವೃದ್ಧಿ ಪಡಿಸುತ್ತಿದೆ. ಇದರಲ್ಲಿ ರೈಲ್ವೆ ಪ್ರಯಾಣಿಕರ ಸಕಲ ಅಗತ್ಯಗಳನ್ನು ಪೂರೈಸಲು ಇಲಾಖೆ ಮುಂದಾಗಿದೆ.

ರೈಲ್ವೆ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವುದರಿಂದ ನಿಗದಿತ ಸ್ಥಳ ತಲುಪುವವರೆಗೆ ಸಕಲ ಸೌಲಭ್ಯಗಳನ್ನು ಈ ಆಪ್ ಬಳಸಿ ಮುಂಗಡವಾಗಿ ಬುಕಿಂಗ್ ಮಾಡಬಹುದಾಗಿದೆ. ಈ ವಿಶಿಷ್ಟ ಆಪ್ ಅನ್ನು ರೈಲ್ವೆ ಇಲಾಖೆ ಮಾರ್ಚ್ನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಈ ಆಪ್ ಬಳಸಿ ಪ್ರಯಾಣಿಕರು ರೈಲು ನಿಲ್ದಾಣಗಳಲ್ಲಿ ಕೂಲಿಗಳನ್ನು ಮುಂಗಡವಾಗಿ ಬುಕ್ ಮಾಡಬಹುದು. ರೈಲ್ವೆ ಟಿಕೆಟ್ ಮತ್ತು ಪ್ಯಾಕೇಜ್ ಟೂರ್ಗಳು, ಮನೆಯಿಂದ ನಿಲ್ದಾಣಕ್ಕೆ ಬರಲು ಮತ್ತು ಹೋಗಲು ಟ್ಯಾಕ್ಸಿ ಮತ್ತು ಆಟೋಗಳನ್ನು ಬುಕ್ ಮಾಡಬಹುದಾಗಿದೆ. ಜತೆಗೆ ರೈಲಿನಲ್ಲಿ ಪ್ರಯಾಣಿಸುವಾಗ ನಿಲ್ದಾಣಗಳಿಗೆ ಸಮೀಪವಿರುವ ತಮ್ಮ ಇಷ್ಟದ ರೆಸ್ಟೋರೆಂಟ್ಗಳಿಂದ ತಮ್ಮ ಆಸನಕ್ಕೆ ಆಹಾರ ತರಿಸಿಕೊಳ್ಳಬಹುದಾಗಿದೆ. ಜತೆಗೆ ಹೋಟೆಲ್ನಲ್ಲಿ ಕೊಠಡಿ ಸಹ ಬುಕ್ ಮಾಡಬಹುದಾಗಿದೆ. ಈ ಮೂಲಕ ರೈಲ್ವೆ ಪ್ರಯಾಣವನ್ನು ಜನಸ್ನೇಹಿಯಾಗಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ರೈಲ್ವೆ ಪ್ರಯಾಣಿಕರಿಗೆ ಸಮಗ್ರ ಸೇವೆಯನ್ನು ಒಂದೇ ಆಪ್ನಲ್ಲಿ ಒದಗಿಸುವ ಸಂಬಂಧ ಟ್ಯಾಕ್ಸಿ ಆಪರೇಟರ್ಗಳು, ರೆಸ್ಟೋರೆಂಟ್ ಮತ್ತು ಹೋಟೆಲ್ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.

Comments are closed.