ರಾಷ್ಟ್ರೀಯ

ಯೋಧನಿಗೆ ವಿದೇಶೀ ಚಿಕಿತ್ಸೆ ಏಕಿಲ್ಲ…? ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಗುರ್ನಾಮ್ ಸಿಂಗ್ ಸಹೋದರಿ ಪ್ರಶ್ನೆ

Pinterest LinkedIn Tumblr

gurjeet-singh

ನವದೆಹಲಿ: ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿಯಾಚೆಯಿಂದ ನಡೆದ ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ಗುರ್ನಾಮ್ ಸಿಂಗ್ (24) ಅವರನ್ನು ಚಿಕಿತ್ಸೆಗಾಗಿ ವಿದೇಶಕ್ಕೆ ಒಯ್ಯುವಂತೆ ಅಥವಾ ವಿದೇಶೀ ವೈದ್ಯರನ್ನು ಚಿಕಿತ್ಸೆಗಾಗಿ ಕರೆಸುವಂತೆ ಯೋಧನ ಸಹೋದರಿ ಗುರುಜೀತ್ ಕೌರ್ ಸರ್ಕಾರಕ್ಕೆ ಕಳಕಳಿಯ ಮನವಿ ಮಾಡಿದ್ದಾರೆ.

ಗುರ್ನಾಮ್ ಸಿಂಗ್ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ, ಸರ್ಕಾರವು ಅವರನ್ನು ಚಿಕಿತ್ಸೆಗಾಗಿ ಏಕೆ ವಿದೇಶಕ್ಕೆ ಕಳಿಸುತ್ತಿಲ್ಲ? ಸಚಿವರು ವಿದೇಶಕ್ಕೆ ಹೋಗಬಹುದಾದರೆ, ಯೋಧರನ್ನೇಕೆ ಒಯ್ಯಬಾರದು ಎಂದು ಸಹೋದರಿ ಗುರುಜೀತ್ ಕೌರ್ ಪ್ರಶ್ನಿಸಿದ್ದಾರೆ.

ಕನಿಷ್ಠ ಪಕ್ಷ ವಿದೇಶೀ ವೈದ್ಯರ ತಂಡವನ್ನಾದರೂ ಕರೆಸಬಹುದಲ್ಲ, ಏಕೆ ಕರೆಸುತ್ತಿಲ್ಲ, ಅವರ ಪರಿಸ್ಥಿತಿ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಕೌರ್ ಹೇಳಿದ್ದಾರೆ.

ಗುರುವಾರ ಜಮ್ಮು ಜಿಲ್ಲೆಯ ಹೀರಾನಗರ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಅಕ್ಟೋಬರ್ 20ರ ನಸುಕಿನಲ್ಲಿ ನಡೆದ ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಗುರ್ನಾಮ್ ಸಿಂಗ್ ಅವರ ತಲೆಗೆ ಗುಂಡೇಟು ಬಿದ್ದಿತ್ತು. ಈ ದಾಳಿಗೆ ಪ್ರಬಲ ಉತ್ತರ ನೀಡಿದ್ದ ಬಿಎಸ್ಎಫ್, 7 ಮಂದಿ ಪಾಕ್ ರೇಂಜರ್ಗಳನ್ನು ಕೊಂದು ಹಾಕಿತ್ತು. ಭಾರತದ ಕಡೆಯಲ್ಲಿ ಗುರ್ನಾಮ್ ಸಿಂಗ್ ಅವರಿಗೆ ಮಾತ್ರ ಗಾಯವಾಗಿತ್ತು.

Comments are closed.