ನವದೆಹಲಿ(ಅ.15): ಬಹಳ ಸಮಯ ಗಂಡನ ಜೊತೆ ಲೈಂಗಿಕ ಕ್ರಿಯೆ ನಡೆಸದೇ ದೂರ ಇಡುವುದು ಮತ್ತು ಸೂಕ್ತ ಕಾರಣ ನೀಡದೇ ಇರುವುದು ಮಾನಸಿಕ ಕ್ರೌರ್ಯ ಎಂದು ಪರಿಗಣಿಸಿ ವಿಚ್ಛೇದನಕ್ಕೆ ಕಾರಣವೆಂದು ಪರಿಗಣಿಸಬಹುದೆಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ನಾಲ್ಕೂವರೆ ವರ್ಷಗಳಿಂದ ನನ್ನ ಪತ್ನಿ ದೈಹಿಕ ಸಂಪರ್ಕಕ್ಕೆ ಸಹಕರಿಸುತ್ತಿಲ್ಲ. ಇದರಿಂದ ನನಗೆ ಮಾನಸಿಕ ಹಿಂಸೆಯಾಗಿದ್ದು, ವಿಚ್ಚೇದನಾ ಕೊಡಿಸುವಂತೆ ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ. ಪತಿಯ ಮನವಿಯನ್ನ ಪುರಸ್ಕರಿಸಿದ ಕೋರ್ಟ್, ವಿಚ್ಛೇದನಕ್ಕೆ ಅನುಮತಿ ನೀಡಿದೆ.