ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್ ಪರಿಣಾಮ: ಉತ್ತರಪ್ರದೇಶದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಮೇಲುಗೈ

Pinterest LinkedIn Tumblr

BJP-logoಲಕ್ನೋ: ಮುಂದಿನ ವರ್ಷ ನಡೆಯಲಿರುವ ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯೋ ಸಾಧ್ಯತೆಯಿದೆ. ಇಂಡಿಯಾ ಟುಡೇ ಹಾಗೂ ಆಕ್ಸಿಸ್ ನಡೆಸಿರೋ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಪಾಕ್ ಮೇಲೆ ನಡೆಸಿರೋ ಸರ್ಜಿಕಲ್ ಸ್ಟ್ರೈಕ್ ಯುಪಿ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಿ ಪರಿಣಮಿಸೋ ಸಾಧ್ಯತೆಯಿದೆ.

ಶೀಲಾ ದೀಕ್ಷಿತ್‍ರನ್ನ ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಚುನಾವಣಾ ಅಖಾಡಕ್ಕಿಳಿದಿರೋ ಕಾಂಗ್ರೆಸ್ ಪಕ್ಷ ಪ್ರೀ ಪೋಲ್ ಸರ್ವೇನಲ್ಲಿ ಭಾರಿ ಹಿನ್ನಡೆ ಕಂಡಿದೆ. ರಾಹುಲ್ ಗಾಂಧಿಯ ಕಿಸಾನ್ ಯಾತ್ರೆಯೂ ಕೈಹಿಡಿಯೋ ಲಕ್ಷಣ ಕಂಡುಬರುತ್ತಿಲ್ಲ. 404 ಅಸೆಂಬ್ಲಿ ಕ್ಷೇತ್ರವನ್ನ ಹೊಂದಿರೋ ಉತ್ತರ ಪ್ರದೇಶದ ಸರ್ವೇನಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆಯದಿದ್ರೂ ಮ್ಯಾಜಿಕ್ ನಂಬರ್‍ಗೆ ಹತ್ತಿರದಲ್ಲಿದೆ.

ಸರ್ವೇ ಪ್ರಕಾರ ಬಿಎಸ್‍ಪಿ 2ನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆಡಳಿತರೂಢ ಸಮಾಜವಾದಿ ಪಕ್ಷ ಭಾರೀ ಹಿನ್ನಡೆ ಕಂಡಿದೆ. ಅತಂತ್ರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಬಿಎಸ್‍ಪಿ ಅಥವಾ ಬಿಜೆಪಿ ಹಾಗೂ ಎಸ್‍ಪಿ ಮೈತ್ರಿ ಸರ್ಕಾರ ರಚನೆ ಸಾಧ್ಯತೆಯೂ ಇದೆ. ಸಮೀಕ್ಷೆಯಲ್ಲಿ ಜನರು ಅಭಿವೃದ್ಧಿಗೆ ಒತ್ತು ಕೊಟ್ಟಿದ್ದು, ರಾಮಮಂದಿರ ವಿಚಾರವನ್ನು ಕಡೆಗಣಿಸಿದ್ದಾರೆ.

ಹಿಂದಿನ ಚುನಾವಣೆ ಹಾಗೂ ಈಗಿನ ಸಮೀಕ್ಷೆಯಲ್ಲಿ ಪಕ್ಷಗಳ ಬಲಾಬಲ:

ಯಾವ ಪಕ್ಷಕ್ಕೆ ಎಷ್ಟು ಶೇಕಡ ಮತ?: ಉತ್ತರಪ್ರದೇಶದ ಮುಂದಿನ ಚುನಾವಣೆಯ ಮತ ಗಳಿಕೆಯಲ್ಲೂ ಬಿಜೆಪಿ ಮುಂದಿದೆ. ಬಿಜೆಪಿಗೆ 31%, ಬಿಎಸ್‍ಪಿ 28%, ಎಸ್‍ಪಿ 25%, ಕಾಂಗ್ರೆಸ್‍ಗೆ 06% ಮತ ಪಡೆದರೆ 10% ಮತ ಇತರರಿಗೆ ಬೀಳಲಿದೆ ಅಂತ ಸಮೀಕ್ಷೆ ತಿಳಿಸಿದೆ.

ಮುಂದಿನ ಸಿಎಂ?: ಉತ್ತರಪ್ರದೇಶದಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾದ್ರೂನೂ ಮುಂದಿನ ಸಿಎಂ ರೇಸ್‍ನಲ್ಲಿ ಬಿಎಸ್‍ಪಿಯ ಬೆಹನ್‍ಜೀ ಮುಂದಿದ್ದಾರೆ. ಮುಂದಿನ ಸಿಎಂ ಯಾರಾಗಬೇಕೆಂಬ ಬಗ್ಗೆ ಉತ್ತರಪ್ರದೇಶ ಜನರ ಒಲವು ಯಾರ ಕಡೆ ಎಷ್ಟು ಇದೆ ಅನ್ನೋದನ್ನ ನೋಡೋದಾದ್ರೆ, ಬಿಎಸ್‍ಪಿ ಪಕ್ಷದ ಮಾಯಾವತಿಗೆ 31%, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್‍ಗೆ 27 %, ಬಿಜೆಪಿಯ ರಾಜ್‍ನಾಥ್ ಸಿಂಗ್‍ಗೆ 18% ಮತ ಸಿಗಲಿದೆ.

ಬಿಜೆಪಿಯ ಯೋಗಿ ಆದಿತ್ಯನಾಥ್ 14%, ಕಾಂಗ್ರೆಸ್‍ನಿಂದ ಶೀಲಾ ದೀಕ್ಷಿತ್‍ಗೆ 01% ಹಾಗೂ ಪ್ರಿಯಾಂಕ ಗಾಂಧಿಗೆ 02% ಮತ ಸಿಗಲಿದೆ ಅಂತ ಅಂದಾಜಿಸಲಾಗಿದೆ.

Comments are closed.