ರಾಷ್ಟ್ರೀಯ

ಅಮೆರಿ ಮುಂದಿನ ಅಧ್ಯಕ್ಷರಾದವರು ಮೊದಲ 100ದಿನಗಳೊಳಗೆ ಭಾರತದ ಪ್ರಧಾನಿ ಮೋದಿಯನ್ನು ಭೇಟಿ ಆಗಲೇಬೇಕು !

Pinterest LinkedIn Tumblr

modi-trump-hillary

ವಾಷಿಂಗ್ಟನ್: ಜನಪ್ರಿಯ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಅಧಿಕಾರವಧಿ ಇನ್ನು ಕೇವಲ 100 ದಿನಗಳು ಮಾತ್ರ ಬಾಕಿಯಿದೆ. ನಂತರ ನೂತನ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಡೆಮೊಗ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಆರಂಭವಾಗಿದೆ. ಈ ನಡುವೆ ಯಾರೇ ಅಮೆರಿ ಅಧ್ಯಕ್ಷರಾದರು ಮೊದಲ 100ದಿನಗಳೊಳಗೆ ಭಾರತದ ಪ್ರಧಾನಿ ನರೆಂದ್ರ ಮೋದಿ ಅವರನ್ನು ಭೇಟಿ ಮಾಡಬೇಕೆಂದು ಅಮೆರಿಕ ಮೂಲದ ಅಂತಾರಾಷ್ಟ್ರೀಯ ಅಧ್ಯನ ಸಂಸ್ಥೆ (ಸಿಎಸ್ಐಎಸ್)ಸಲಹೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಸ್ತುತ ಅಮೆರಿಕ ಅಧ್ಯಕ್ಷರಾದ ಬರಾಕ್ ಒಬಾಮ ಹಲವು ಬಾರಿ ಭೇಟಿ ಮಾಡಿ, ಪರಸ್ಪರ ಮಾತುಕತೆ ನಡೆಸಿದ್ದಾರೆ. ಇದು ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಈ ಸಂಬಂಧವನ್ನು ಮುಂದೆ ಕೂಡ ಕಾಯ್ದುಕೊಳ್ಳಬೇಕಾದ ಅಗತ್ಯತೆಯಿದೆ. ಆದ್ದರಿಂದ ಯಾರೇ ಅಧ್ಯಕ್ಷರಾದರೂ ತಮ್ಮ ಅಧಿಕಾರವಧಿಯ ಮೊದಲ ನೂರು ದಿನಗಳೊಳಗೆ ಮೋದಿ ಅವರನ್ನು ಭೇಟಿ ಮಾಡುವುದು ತ್ಯಗತ್ಯ ಎಂದು ಸಿಎಸ್ಐಎಸ್ ತಿಳಿಸಿದೆ.

ಭಾರತ ಮತ್ತು ಅಮೆರಿಕ ಭದ್ರತಾ ಸಹಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಸಲಿದೆ. ಇದರ ಜತೆಗೆ ಆಡಳಿತಾತ್ಮಕ ಒಪ್ಪಂದ ಸಹ ನಡೆದು, ಭಾರತ-ಅಮೆರಿಕ ಬಾಂಧವ್ಯ ಇನ್ನಷ್ಟು ಬಲಿಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿಎಸ್ಐಎಸ್ ಹೇಳಿದೆ.

ರಕ್ಷಣೆ, ವಿದೇಶಿ ವಿನಿಮಯ, ತಂತ್ರಜ್ಞಾನ ಹಾಗೂ ಆಡಳಿತಾತ್ಮಕ ಒಪ್ಪಂದಗಳು ಉಭಯ ದೇಶಗಳ ನಡುವೆ ನಡೆಯಲಿದೆ. ಅಷ್ಟೇ ಅಲ್ಲ ಭಯೋತ್ಪಾದನೆ ಹತ್ತಿಕ್ಕಲ್ಲು ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತು ಅಮೆರಿಕ ನಡುವೆ ಚಥುಷ್ಪತ ಸಮನ್ವಯ ಒಪ್ಪಂದ ಏರ್ಪಟ್ಟು, ತಾಲಿಬಾನ್ನಂತಹ ಉಗ್ರ ಸಂಘಟನೆ ಹತ್ತಿಕ್ಕಬೇಕಾದ ಅಗತ್ಯತೆಯಿದೆ. ಮೋದಿ ಅವರು ಏಷ್ಯಾದಲ್ಲಿಯೇ ಅತ್ಯಂತ ಪ್ರಭಾವಿ ನಾಯಕರು. ಈ ಹಿನ್ನಲೆ ಅಮೆರಿಕ ಭಾರತದೊಂದಿಗೆ ಕೈ ಜೋಡಿಸಿ, ಮುನ್ನಡೆಯಬೇಕಾಗಿದೆ ಎಂದು ಸಿಎಸ್ಐಎಸ್ ಹೇಳಿದೆ.

Comments are closed.