ರಾಷ್ಟ್ರೀಯ

ಮೋದಿ, ಷಾ, ಗೋಡ್ಸೆ ಸೇರಿದಂತೆ ಹಲವರ ಮುಖಗಳುಳ್ಳ ಪ್ರತಿಕೃತಿಯನ್ನು ದಹಿಸಿ ದಸರಾ ಆಚರಿಸಿದ ಜೆಎನ್‌ಯುನ ವಿದ್ಯಾರ್ಥಿಗಳ ಗುಂಪು

Pinterest LinkedIn Tumblr

jnu

ನವದೆಹಲಿ: ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ, ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಮ್‌ ಗೋಡ್ಸೆ ಸೇರಿದಂತೆ ಹಲವರ ಮುಖಗಳುಳ್ಳ ಪ್ರತಿಕೃತಿಯನ್ನು ದಹಿಸಿ ದಸರಾ ಆಚರಿಸಿದೆ.

ರಾವಣನನ್ನು ಹೋಲುವ ಹತ್ತು ತಲೆಯ ಪ್ರತಿಕೃತಿಯನ್ನು ಜೆಎನ್‌ಯು ಆವರಣದಲ್ಲಿ ಮಂಗಳವಾರ ದಹಿಸಲಾಗಿದೆ.

ಮೋದಿ, ಷಾ, ಗೋಡ್ಸೆ ಚಿತ್ರಗಳ ಜತೆಗೆ ಯೋಗ ಗುರು ಬಾಬಾ ರಾಮ್‌ದೇವ್, ಸಾಧ್ವಿ ಪ್ರಗ್ಯಾ, ಅಸಾರಾಂ ಬಾಪು ಅವರ ಚಿತ್ರಗಳನ್ನೂ ಪ್ರತಿಕೃತಿಯ ಹತ್ತು ತಲೆಗಳಿಗೆ ಅಂಟಿಸಲಾಗಿತ್ತು.

‘ಅಸತ್ಯದ ವಿರುದ್ಧ ಸತ್ಯದ ಗೆಲುವಿನ ಸಂಕೇತವಾಗಿ ನಾವು ಪ್ರತಿಕೃತಿ ದಹಿಸಿದ್ದೇವೆ. ನಮ್ಮ ಪಾಲಿಗೆ ಮೋದಿ ಮತ್ತು ಆರ್‌ಎಸ್‌ಎಸ್‌ ಅಸತ್ಯದ ಸಂಕೇತ’ ಎಂದು ನ್ಯಾಷನಲ್‌ ಸ್ಟುಡೆಂಟ್ಸ್‌ ಯೂನಿಯನ್‌ ಆಫ್‌ ಇಂಡಿಯಾದ (ಎನ್‌ಎಸ್‌ಯುಐ) ಸದಸ್ಯ ಸನ್ನಿ ಡಿಮನ್ ತಿಳಿಸಿದ್ದಾರೆ.

‘ಪ್ರತಿಕೃತಿ ದಹನದ ವಿಷಯ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಜೆಎನ್‌ಯು ಕುಲಪತಿ ಎಂ. ಜಗದೀಶ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

Comments are closed.