ರಾಷ್ಟ್ರೀಯ

ಈ ಆಂಡ್ರಾಯ್ಡ್ ಫೋನಿನ ಬೆಲೆ 2400 ರೂ.

Pinterest LinkedIn Tumblr

andraidನವದೆಹಲಿ: ಸ್ಮಾರ್ಟ್‍ಫೋನ್ ಕಂಪೆನಿಗಳು ಈಗ 4ಜಿ ಎಲ್‍ಟಿಇ ಆಧಾರಿತ ಫೋನ್ ತಯಾರಿಸಲು ಮುಂದಾಗುತ್ತಿದ್ದರೆ, ಇಂಟೆಕ್ಸ್ 3ಜಿ ಸ್ಮಾರ್ಟ್‍ಫೋನ್ ಖರೀದಿಸುವ ಮಂದಿಗಾಗಿ ಕಡಿಮೆ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ ಬಿಡುಗಡೆ ಮಾಡಿದೆ.

ಇಂಟೆಕ್ಸ್ ಅಕ್ವಾ ಇಕೋ 3ಜಿಯನ್ನು ಬಿಡುಗಡೆ ಮಾಡಿದ್ದು, ಈ ಫೋನಿಗೆ 2,400 ರೂ. ಬೆಲೆಯನ್ನು ನಿಗದಿಪಡಿಸಿದೆ.

ಆಂಡ್ರಾಯ್ಡ್ ಕಿಟ್‍ಕ್ಯಾಟ್ ಆಪರೇಟಿಂಗ್ ಸಿಸ್ಟಂ 4 ಇಂಚಿನ WVGA ಸ್ಕ್ರೀನ್( 480*800 ಪಿಕ್ಸೆಲ್), 1 GHz ಡ್ಯುಯಲ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್, 256 ಎಂಬಿ ರಾಮ್, 512 ಎಂಬಿ ಆಂತರಿಕ ಮಮೊರಿಯನ್ನು ಹೊಂದಿದೆ.

ಎಸ್‍ಡಿ ಕಾರ್ಡ್ ಮೂಲಕ 32 ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದಾಗಿದ್ದು, ಹಿಂದುಗಡೆ ಮತ್ತು ಮುಂದುಗಡೆ ವಿಜಿಎ ಕ್ಯಾಮೆರಾ ನೀಡಲಾಗಿದೆ. 118 ಗ್ರಾಂ ತೂಕದ ಫೋನ್ 1400 ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ನೀಲಿ, ಕಪ್ಪು, ಬಿಳಿ ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.

Comments are closed.