ಜೌನ್ಪುರ್ : ಹದಿಮೂರು ವರ್ಷದ ವಿದ್ಯಾರ್ಥಿಯನ್ನು ಸಹಪಾಠಿಗಳೇ ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಗೌರಾಬಾದಾಶಹಾಪುರದಲ್ಲಿ ನಡೆದಿದೆ.
ಗ್ರಾಮೋದೆ ಇಂಟರ್ ಕಾಲೇಜ್ ನ 9ನೇ ತರಗತಿ ವಿದ್ಯಾರ್ಥಿ ಅಲ್ತಮಸ್ ನನ್ನು ಆತನ ಸಹಪಾಠಿಗಳೇ ಕಾಲೇಜಿನ ಆವರಣದಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೀಘ್ರವೇ ಕಾಲೇಜು ಆಡಳಿತ ಮಂಡಳಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆತ ಮೃತ ಪಟ್ಟಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Comments are closed.