ರಾಷ್ಟ್ರೀಯ

68 ದಿನ ಉಪವಾಸ ವ್ರತ ಆಚರಿಸಿ ಸಾವನ್ನಪ್ಪಿದ 13ರ ಹರೆಯದ ಬಾಲಕಿ

Pinterest LinkedIn Tumblr

ja

ಹೈದರಾಬಾದ್: ‘ಚೌಮಾಸ’ ಪವಿತ್ರ ಅವಧಿಯಲ್ಲಿ ಜೈನ ವಿಧಿವಿಧಾನಗಳಿಗೆ ಅನುಗುಣವಾಗಿ ಹೈದರಾಬಾದ್ನಲ್ಲಿ 68 ದಿನ ಉಪವಾಸ ವ್ರತ ಕೈಗೊಂಡಿದ್ದ 13 ವರ್ಷದ ಬಾಲಕಿ, ವ್ರತ ಪೂರೈಸಿದ ಬಳಿಕ ಕಳೆದವಾರ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಎಂಟನೇ ತರಗತಿಯ ವಿದ್ಯಾರ್ಥಿನಿ ಆರಾಧನಾಳನ್ನು ವ್ರತ ಪೂರೈಸಿದ ಎರಡೇ ದಿನಗಳಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಹೃದಯಸ್ಥಂಭನದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಆರಾಧನಾ ಅಂತ್ಯಕ್ರಿಯೆಯಲ್ಲಿ ಕನಿಷ್ಠ 600 ಪಾಲ್ಗೊಂಡಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಆಕೆಯನ್ನು ‘ಬಾಲ ತಪಸ್ವಿ’ ಎಂದು ಶ್ಲಾಘಿಸಿದರು. ಅಂತ್ಯಯಾತ್ರೆಯನ್ನು ’ಶೋಭಾಯಾತ್ರೆ’ ಎಂದು ಕರೆಯಲಾಗಿತ್ತು. ಆರಾಧನಾಳ ಕುಟುಂಬ ಚಿನ್ನಾಭರಣದ ವ್ಯವಹಾರ ಮಾಡುತ್ತಿದ್ದು, ಸಿಕಂದರಾಬಾದ್ನ ಪಾಟ್ ಬಜಾರ್ ಪ್ರದೇಶದಲ್ಲಿ ಅಂಗಡಿ ಹೊಂದಿದೆ.

ಇಷ್ಟು ಪುಟ್ಟ ಬಾಲಕಿಗೆ ಶಾಲೆ ತಪ್ಪಿಸಿ ಉಪವಾಸ ವ್ರತ ಕೈಗೊಳ್ಳಲು ಬಿಟ್ಟದ್ದು ಏಕೆ ಎಂದು ಈಗ ಪ್ರಶ್ನೆಗಳು ಎದ್ದಿವೆ. ಸಾಮಾನ್ಯವಾಗಿ ಹಿರಿಯ ವ್ಯಕ್ತಿಗಳು ಮಾತ್ರ ಇಂತಹ ಜೈನ ಸಂಪ್ರದಾಯದ ದೇಹ ದಂಡನೆಯ ವ್ರತಗಳನ್ನು ಕೈಗೊಳ್ಳುತ್ತಾರೆ ಎನ್ನಲಾಗಿದೆ. ಬಾಲಕಿ ಈ ಹಿಂದೆ ಇದೇ ರೀತಿ 41 ದಿನಗಳ ಉಪವಾಸ ವ್ರತ ಕೈಗೊಂಡಿದ್ದಳು ಎಂದು ಹೇಳಲಾಗಿದೆ.

Comments are closed.