ಅಂತರಾಷ್ಟ್ರೀಯ

ಅಥ್ಲೆಟಿಕ್ಸ್‌ ಸ್ಪರ್ಧೆಯ ಮುನ್ನಾದಿನ ರಾತ್ರಿ ಸೆಕ್ಸ್  ನಡೆಸಿದರೆ ಸ್ಪರ್ಧಿಯ ಸಾಮರ್ಥ್ಯ ಹೆಚ್ಚಾಗುತ್ತಂತೆ! ಸಂಶೋಧನೆ ವರದಿ

Pinterest LinkedIn Tumblr

athletic

ಲಂಡನ್‌: ವಿಶ್ವದ ಬಹುತೇಕ ಕ್ರಿಕೆಟ್‌ ಆಟಗಾರರು ಅದರಲ್ಲೂ ಭಾರತೀಯರು ಸ್ತ್ರೀಯರ ಸಹವಾಸದಿಂದಲೇ ತಮ್ಮ ಪ್ರದರ್ಶನಮಟ್ಟವನ್ನು ಕಳಪೆಯಾಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಕೆಲವು ರಾಷ್ಟ್ರಗಳು ಪ್ರವಾಸದ ವೇಳೆ ಕ್ರಿಕೆಟಿಗರು ತಮ್ಮೊಂದಿಗೆ ಪತ್ನಿಯನ್ನು ಒಯ್ಯುವುದನ್ನೇ ನಿಷೇಧಿಸಿದ್ದವು. ಇತ್ತೀಚೆಗಷ್ಟೇ ಬಹುತೇಕ ಕ್ರಿಕೆಟ್‌ ಮಂಡಳಿಗಳು ತಮ್ಮ ಅಭಿಪ್ರಾಯ ಬದಲಿಸಿಕೊಂಡಿವೆ.

ತಹ ಹೊತ್ತಿನಲ್ಲಿ ಇಟಲಿ ಫ್ಲಾರೆನ್ಸ್‌ ವಿವಿಯ ಪ್ರೊಫೆಸರ್‌ ಸಂಶೋಧನೆಯೊಂದನ್ನು ಮಾಡಿ ಅಚ್ಚರಿಯ ಮಾಹಿತಿ ಹೊರ ಹಾಕಿದ್ದಾರೆ. ಯಾವುದೇ ಅಥ್ಲೆಟಿಕ್ಸ್‌ ಸ್ಪರ್ಧೆಯ ಮುನ್ನಾದಿನ ರಾತ್ರಿ ಲೈಂಗಿಕ ಕ್ರಿಯೆ ನಡೆಸಿದರೆ ಸ್ಪರ್ಧಿಯ ಸಾಮರ್ಥ್ಯ ಹೆಚ್ಚಾಗುತ್ತಂತೆ! ಫ್ಲಾರೆನ್ಸ್‌ ವಿವಿಯ ಸಂಶೋ ಧಕಿ ಲಾರಾ ಸ್ಟೆಫಾನಿ ಈ ಬಗ್ಗೆ ಪ್ರತಿಕ್ರಿಯಿಸಿ, ಲೈಂಗಿಕ ಕ್ರಿಯೆ ನಡೆಸಿದರೆ ಆಟದ ಸಾಮರ್ಥ್ಯ ಕುಸಿಯುತ್ತದೆ ಎನ್ನುವುದು ತಪ್ಪು ಅಭಿಪ್ರಾಯ. ಇದಕ್ಕೆ ಸೂಕ್ತ ಸಾಕ್ಷ್ಯವಿಲ್ಲ ಎಂದಿದ್ದಾರೆ. ಅದನ್ನು ನಿವಾರಿಸಲೆಂದೇ ಸ್ಟೆಫಾನಿ ಈ ಮಹತ್ವದ ಶೋಧ ನಡೆಸಿದ್ದಾರೆ.

ಸಂಶೋಧನೆ ಏನು ಹೇಳುತ್ತೆ? ಈ ಸಂಶೋಧನೆ ಮಾಡಲು ಈ ಕುರಿತು ನಡೆದ ನೂರಾರು ಸಂಶೋಧನೆಗಳನ್ನು ಲಾರಾ ಅಧ್ಯಯನ ನಡೆಸಿದ್ದಾರೆ. ಹಲವಾರು ಮಾರ್ಗದರ್ಶಿ ಸೂತ್ರಗಳ ಮೂಲಕ ಅಥ್ಲೀಟ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.

ಅಂತಿಮವಾಗಿ 9 ಮಂದಿಯನ್ನು ಉಳಿಸಿಕೊಳ್ಳಲಾಗಿದೆ. ಅದರಲ್ಲಿ ಒಬ್ಟಾಕೆ, ಮುನ್ನಾದಿನದ ಲೈಂಗಿಕ ಕ್ರಿಯೆಯಿಂದ ಯಾವ ಬದಲಾವಣೆಯೂ ಆಗಿಲ್ಲ ಎಂದಿದ್ದರೆ, ಇನ್ನೊಬ್ಬ ಮ್ಯಾರಥಾನ್‌ ಪಟು ಮಾತ್ರ ನನ್ನ ಸಾಮರ್ಥ್ಯ ಹೆಚ್ಚಾಗಿದೆ ಎಂದಿದ್ದಾರೆ. ಈ ಅಭಿಪ್ರಾಯಗಳನ್ನೆಲ್ಲ ಕ್ರೋಢೀಕರಿಸಿ ಲಾರಾ ಲೈಂಗಿಕ ಕ್ರಿಯೆಯಿಂದ ಕ್ರೀಡೆಗೆ ಸಮಸ್ಯೆಯಿಲ್ಲ ಎಂಬ ಅಂತಿಮ ತೀರ್ಪು ಕೊಟ್ಟಿದ್ದಾರೆ.

Comments are closed.