ಹೊಸದಿಲ್ಲಿ : ಆಘಾಕಾರಿ ಸುದ್ದಿ. ಬಿಸಿಲಿನ ದಾಹ ತೀರಿಸಿಕೊಳ್ಳಲು ನೀವು ತಂಪುಪಾನೀಯದ ಹೆಸರಿನಲ್ಲಿ ವಿಷ ಕುಡಿಯುತ್ತಿದ್ದೀರಿ.ಪು ಪಾನೀಯಗಳಲ್ಲಿ ಆಂಟಿಮೊನಿ, ಸತು, ಕ್ರೋಮಿಯಂ ಹಾಗೂ ಕ್ಯಾಡ್ಮಿಯಂನಂಥ ವಿಷಕಾರಿ ಅಂಶಗಳು ಇರುವುದನ್ನು ಸರಕಾರಿ ಅಧ್ಯಯನವೊಂದು ಬಹಿರಂಗಪಡಿಸಿದೆ. ಪ್ರಮುಖ ಬಹುರಾಷ್ಟ್ರೀಯ ಕಂಪೆನಿಗಳಾದ ಪೆಪ್ಸಿಕೊ ಹಾಗೂ ಕೊಕೊ ಕೋಲಾ, ವಿಶ್ಲೇಷಣೆಗೆ ಪ್ರಸ್ತುತಪಡಿಸಿದ ಐದು ಪಾನೀಯಗಳಲ್ಲಿ ಇಂಥ ವಿಷಕಾರಿ ಅಂಶಗಳು ಇರುವುದು ಪತ್ತೆಯಾಗಿದೆ.
ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ನಡೆಸಿರುವ ಈ ಪರೀಕ್ಷೆಯಲ್ಲಿ, ಪೆಟ್ ಬಾಟಲಿಗಳಲ್ಲಿ ತುಂಬಿದ ಪೆಪ್ಸಿ,ಕೋಲಾ, ಮೌಂಟೇನ್ ಡ್ಯೂ, ಸ್ಪ್ರೈಟ್ ಹಾಗೂ 7 ಅಪ್ ಪಾನೀಯಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಮೌಂಟೇನ್ ಡ್ಯೂ ಹಾಗೂ 7ಅಪ್ ಪೆಪ್ಸಿಕೋ ಕಂಪನಿಯ ಉತ್ಪನ್ನಗಳಾದರೆ ಸ್ಪ್ರೈಟ್ ಕೊಕೊ ಕೋಲಾ ಕಂಪನಿಯ ಉತ್ಪನ್ನ.ಕಳೆದ ಫೆಬ್ರವರಿ- ಮಾರ್ಚ್ನಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶ ವರದಿ ಲಭ್ಯವಾಗಿದೆ ಎಂದು ವರದಿ ಮಾಡಿದೆ.
ಡಿಟಿಎಬಿ ಸೂಚನೆಯಂತೆ, ಕೊಲ್ಕತ್ತಾ ಮೂಲದ ಅಳಿಕ ಭಾರತೀಯ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಈ ಪರೀಕ್ಷೆ ನಡೆಸಲಾಗಿದೆ. ಈ ವರದಿಯನ್ನು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಹಾಘೂ ಡಿಟಿಎಬಿ ಅಧ್ಯಕ್ಷ ಜಗದೀಶ್ ಪ್ರಸಾದ್ ಅವರಿಗೆ ಸಲ್ಲಿಸಲಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ಬಯಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಪರೀಕ್ಷಾ ವರದಿ ಇನ್ನೂ ನಮ್ಮ ಕೈಸೇರಿಲ್ಲ ಎಂದು ಪೆಪ್ಸಿಕೋ ವಕ್ತಾರ ಹೇಳಿದ್ದಾರೆ. ಕೊಕೊ ಕೋಲಾ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಕೃಪೆ : ವಾಭಾ