ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್: ಪ್ರತ್ಯಕ್ಷದರ್ಶಿಗಳ ವಿವರಣೆ

Pinterest LinkedIn Tumblr

armyಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ ಒಳನುಗ್ಗಿ ಭಾರತೀಯ ಕಮಾಂಡೋಗಳು ನಡೆಸಿದ ಸರ್ಜಿಕಲ್ ದಾಳಿಗೆ ಸಾಕ್ಷಿ ದೊರೆತಿದೆ. ದೂಧ್‍ನಿಯಾಲ್, ಅಲ್‍ಹಾವಿ ಬ್ರಿಡ್ಜ್, ಚಲ್ಹಾನಾ, ಲೀಪಾ, ಖೈರಾತಿ ಭಾಗ್ ಮತ್ತು ಅಥ್‍ಮುಕಮ್‍ನಲ್ಲಿ ಭಾರತದ ದಿಟ್ಟ ಕಾರ್ಯಾಚರಣೆ ಬಗ್ಗೆ ಸ್ಥಳೀಯರೇ ಮಾಹಿತಿ ನೀಡಿದ್ದಾರೆ ಎಂದು ಇಂಡಿಯನ್ಸ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಪ್ರವೀಣ್‍ಸ್ವಾಮಿ ಎಂಬವರು ಗಡಿ ನಿಯಂತ್ರಣ ರೇಖೆ ಬಳಿ ನೆಲೆಸಿರುವ ಸ್ಥಳಿಯರನ್ನು ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಸೈನಿಕರ ದಾಳಿ ಬಗ್ಗೆ ಹಲವಾರು ವಿಚಾರಗಳನ್ನು ಜನ ಹಂಚಿಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?: ಮೊದಲು ಆಲ್‍ಹವಾಯಿ ಬ್ರಿಡ್ಜ್ ಬಳಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿತ್ತು. ಅಲ್ಲದೆ ಕಟ್ಟಡವೊಂದು ಹೊತ್ತಿ ಉರಿಯುತ್ತಿತ್ತು. ಚಲ್ಹಾನದ ಲಷ್ಕರ್ ಅಡಗುದಾಣದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್‍ನಲ್ಲಿ ಐದರಿಂದ ಆರು ಉಗ್ರರು ಹತರಾಗಿದ್ರು. ಮರುದಿನ ಬೆಳಗ್ಗೆಯೇ ಟ್ರಕ್‍ನಲ್ಲಿ ಉಗ್ರರ ಮೃತದೇಹಗಳನ್ನ ಮಣ್ಣು ಮಾಡಲು ಬೇರೆಡೆ ಸಾಗಿಸಿಸಲಾಯ್ತು. ಆಥ್‍ಮುಕಂನಲ್ಲೂ ಸ್ಫೋಟದ ಸದ್ದುಗಳು ಕೇಳಿ ಬಂದಿತ್ತು. ಖೈರತಿ ಭಾಗ್‍ನಲ್ಲಿ ಲಷ್ಕರ್ ಎ ತೋಯ್ಬಾಗೆ ಸೇರಿದ ಕಟ್ಟಡ ಧ್ವಂಸಗೊಳಿಸಿದ್ರೆ, ಲೀಪಾದಲ್ಲಿ 25 ಅಡಗುದಾಣಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ನಿನ್ನೆ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಮತ್ತು ದೆಹಲಿ ಸಿಎಂ ಕೇಜ್ರಿವಾಲ್ ಸರ್ಜಿಕಲ್ ಸ್ಟ್ರೈಕ್‍ಗೆ ಸಾಕ್ಷ್ಯ ಒದಗಿಸಿ ಅಂತಾ ಹೇಳಿದ್ರು. ಇದೇ ವಿಚಾರವಾಗಿ ಇಂದು ನಡೆದ ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಸೇನಾಧಿಕಾರಿಗಳು ಸರ್ಜಿಕಲ್ ದಾಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾರೆ.

Comments are closed.