ರಾಷ್ಟ್ರೀಯ

ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

Pinterest LinkedIn Tumblr

army-2ಜಮ್ಮು: ಪಾಕಿಸ್ತಾನ ಸೇನೆ ಸೋಮವಾರ ನಾಲ್ಕನೇ ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯ ಬಳಿ ಸೇನಾ ಶಿಬಿರಗಳನ್ನು ಹಾಗೂ ನಾಗರಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ಹಾಗೂ 120 ಎಂಎಂ ಮಾರ್ಟರ್ ಬಾಂಬ್ ದಾಳಿ ನಡೆಸಿದೆ.
ಪಾಕ್ ಅಪ್ರಚೋದಿತ ದಾಳಿ ಭಾರತ ಸಹ ತಕ್ಕ ಪ್ರತ್ಯುತ್ತರ ನೀಡಿದ್ದು, ಗುಂಡಿನ ಚಕಮಕಿ ವೇಳೆ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ.
ಪೂಂಜ್ ಜಿಲ್ಲೆಯ ಶಹಾಪುರ್, ಕೃಷ್ಣಘಾಟ್, ಮಂಡಿ ಹಾಗೂ ಸಬ್ ಜಿಯಾನ್ ಸೆಕ್ಚರ್ ಗಳ ಮೇಲೆ ಪಾಕ್ ಸೇನೆ ದಾಳಿ ನಡೆಸಿದೆ ಎಂದು ರಕ್ಷಣಾ ವಕ್ತಾರ ಕರ್ನಲ್ ಮನಿಶ್ ಮೆಹ್ತಾ ಅವರು ತಿಳಿಸಿದ್ದಾರೆ. ಅಲ್ಲದೆ ಉಭಯ ದೇಶಗಳ ನಡುವೆ ಗುಂಡಿನ ಕಾಳಗ ಮುಂದುವರೆದಿದೆ ಎಂದು ಹೇಳಿದ್ದಾರೆ.
ಸೀಮಿತ ದಾಳಿ ಬಳಿಕ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪಾಕಿಸ್ತಾನ ಸತತ ಯತ್ನ ನಡೆಸುತ್ತಿದ್ದು, ಗಡಿ ನುಸುಳಲು ಹಲವು ಪ್ರಯತ್ನಗಳನ್ನು ನಡೆಸುತ್ತಿದೆ. ಪೂಂಚ್ ಸೆಕ್ಟರ್ ನಲ್ಲಿ ಒಂದೆಡೆ ಸೇನೆಯ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರದ ಪಲ್ಲಾನ್ವಾಲಾ ಒಲ್ಒಸಿಯಲ್ಲಿಯೂ ಸೇನೆಯ ಮೇಲೆ ಶೆಲ್ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Comments are closed.