ರಾಷ್ಟ್ರೀಯ

ಪಾಕ್‌ ನಿಂದ ಭಾರತದೆಡೆಗೆ ಬರುತ್ತಿರುವ 2 ಶಂಕಿತ ಬೋಟುಗಳು

Pinterest LinkedIn Tumblr

doನವದೆಹಲಿ: ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಉಗ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕರಾಚಿಯಿಂದ ಎರಡು ಶಂಕಾಸ್ಪದ ಬೋಟುಗಳು ಹೊರಟಿದ್ದು, ಈ ಸಂಬಂಧ ಗುಜರಾತ್‌ ಮತ್ತು ಮಹಾರಾಷ್ಟ್ರ ಕರಾವಳಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಪಾಕಿಸ್ತಾನದಿಂದ ಎರಡು ಶಂಕಾಸ್ಪದ ಬೋಟ್ ಗಳು ಭಾರತದ ಕರಾವಳಿಗೆ ಧಾವಿಸುತ್ತಿರುವುದಾಗಿ ಭಾರತದ ಮಲ್ಟಿ ಏಜನ್ಸಿ ಸೆಂಟರ್‌ (ಎಂಎಸಿ) ಎಚ್ಚರಿಕೆ ನೀಡಿದೆ.
ಭಾನುವಾರವಷ್ಟೇ ಗುಜರಾತ್‌ ಕರಾವಳಿಯಲ್ಲಿ ಶಂಕಾಸ್ಪದ ಪಾಕ್‌ ಬೋಟ್‌ ಒಂದನ್ನು ಹಾಗೂ 9 ನಾವಿಕರನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದವು. ಗುಜರಾತ್‌ ದೂರ ಸಮುದ್ರದಲ್ಲಿ ಭಾರತದ ಕರಾವಳಿ ಕಾವಲು ಪಡೆಯ ಸಮುದ್ರ ಪಾವಕ್‌ ನೌಕೆ ಪಾಕಿಸ್ಥಾನದ ಈ ಶಂಕಾಸ್ಪದ ಬೋಟನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿತ್ತು.
ಪಾಕಿಸ್ಥಾನದ ಈ ಶಂಕಾಸ್ಪದ ಬೋಟು ಭಾನುವಾರ ಬೆಳಗ್ಗೆ 10.15ರ ಹೊತ್ತಿಗೆ ಭಾರತೀಯ ಸಮುದ್ರ ವ್ಯಾಪ್ತಿಯನ್ನು ಪ್ರವೇಶಿಸುತ್ತಿದ್ದಂತೆಯೇ ಬೋಟ್‌ ಹಾಗೂ ಅದರಳಗಿನ ನಾವಿಕರನ್ನು ಕೋಸ್ಟ್‌ ಗಾರ್ಡ್‌ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ವಶಕ್ಕೆ ಪಡೆಯಲಾಗಿರುವ ಬೋಟ್‌ ಹಾಗೂ ಅದರೊಳಗಿದ್ದ ನಾವಿಕರನ್ನು ಅನಂತರ ಪೋರಬಂದರ್‌ಗೆ ಒಯ್ಯಲಾಗಿದ್ದು. ಕೋಸ್ಟ್‌ ಗಾರ್ಡ್‌ನ ಅಧಿಕೃತ ಪ್ರಕಟನೆ ಈ ವಿಷಯವನ್ನು ಬಹಿರಂಗಪಡಿಸಿತ್ತು.

Comments are closed.