ರಾಷ್ಟ್ರೀಯ

65,250 ಕೋಟಿ ಕಪ್ಪುಹಣ ಘೋಷಣೆ: ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ

Pinterest LinkedIn Tumblr

Arun Jaitley2-700ನವದೆಹಲಿ: ಆದಾಯ ಘೋಷಣೆ ಯೋಜನೆಯಡಿ (ಐಡಿಎಸ್‌) ₹ 65,250 ಕೋಟಿ ಕಪ್ಪು ಹಣ ಘೋಷಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ 30ರೊಳಗೆ ಕಪ್ಪು ಹಣ ಘೋಷಣೆಗೆ ಅವಕಾಶ ನೀಡಲಾಗಿತ್ತು. ಈ ಗಡುವಿನೊಳಗೆ 64,275 ಮಂದಿ ಆದಾಯ ಘೋಷಣೆ ಮಾಡಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.

ಘೋಷಿಸಲಾಗಿರುವ ₹ 65,250 ಕೋಟಿಯಲ್ಲಿ ಶೇಕಡ 45ರಷ್ಟು ಹಣ ತೆರಿಗೆ ಹಾಗೂ ದಂಡದ ರೂಪದಲ್ಲಿ ಸರ್ಕಾರದ ಬೊಕ್ಕಸ ಸೇರಲಿದೆ.

ಮೋದಿ ಅಭಿನಂದನೆ
ಐಡಿಎಸ್‌ ಯೋಜನೆಯಡಿ ಆದಾಯ ಘೋಷಿಸಿಕೊಂಡವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

‘ಆರ್ಥಿಕ ಪಾರದರ್ಶಕತೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಇದು ಉತ್ತಮ ಕೊಡುಗೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

Comments are closed.