ರಾಷ್ಟ್ರೀಯ

ಕೋಟ್ಯಾಧಿಪತಿ ಸೇಲ್ಸ್ ಮನ್ ಮನೆಗೆ ಲೋಕಾ ದಾಳಿ

Pinterest LinkedIn Tumblr

Lokayuktha-600

ಭೋಪಾಲ್: ಆತ ವೃತ್ತಿಯಲ್ಲಿ ಸೇಲ್ಸ್ ಮನ್, ಆತನ ಕೆಲಸಕ್ಕೆ ತಿಂಗಳಿಗೆ ಸಾವಿರದ ಇನ್ನೂರು ರೂಪಾಯಿ ಸಂಬಳ ಬರುತ್ತಿತ್ತು. ಆದ್ರೆ ಆತನೊಬ್ಬ ಕೋಟ್ಯಾಧಿಪತಿ ಎನ್ನುವುದು ಲೋಕಾಯುಕ್ತ ದಾಳಿಯಲ್ಲಿ ತಿಳಿದಿದೆ.

ಹೌದು, ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮಹಾ ಭ್ರಷ್ಟನೊಬ್ಬ ಸಿಕ್ಕಿಬಿದ್ದಿದ್ದಾನೆ. ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ ಸುರೇಶ್ ಪ್ರಸಾದ್ ಪಾಂಡೆ ಎಂಬಾತನ ಮೇಲೆ ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಲೋಕಾ ರೈಡ್ ನಡೆದಿದ್ದು, ದಾಳಿ ವೇಳೆ ಆತನ ಮನೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಹಣ, ಚಿನ್ನಾಭರಣಗಳು ದೊರೆಕಿವೆ.

ಕೋಟ್ಯಾಧಿಪತಿ: ಸ್ಥಳೀಯರ ಮಾಹಿತಿ ಆಧರಿಸಿ ರೈಡ್ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ಅಕ್ಷರಶಃ ದಂಗಾಗಿ ಹೋಗಿದ್ರು. ಯಾಕಂದ್ರೆ ಈತನ ಮನೆಯಲ್ಲಿ ಸೂಟ್‍ಕೇಸ್‍ಗಟ್ಟಲೇ ಹಣದ ಕಂತೆ ಸಿಕ್ಕಿತ್ತು. ಕೋಟಿಗೂ ಮೀರಿದ ಚಿನ್ನಾಭರಣಗಳು ದೊರೆಕಿವೆ. ಜೊತೆಗೆ ಡಬಲ್ ಬ್ಯಾರೆಲ್ ಗನ್, ಬೊಲೆರೋ, ಆಲ್ಟೋ ಕಾರುಗಳು ಹಾಗೂ ಆಕ್ಟೀವಾ ಬೈಕ್, ಹೋಂಡಾ ಶೈನ್ ಬೈಕ್‍ಗಳು ದೊರಕಿವೆ.

ಇದಲ್ಲದೇ ಪಾಂಡೆ ಪತ್ನಿ ಹಾಗೂ ಮಗನ ಹೆಸರಿನಲ್ಲಿ ಸೇರಿದಂತೆ 8 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನ ಹೊಂದಿದ್ದು, ಇದರಲ್ಲಿ ಎಷ್ಟು ಹಣ ಜಮಾವಣೆಯಾಗಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ, ಅಲ್ಲದೇ ದಾಳಿ ವೇಳೆ ಅಧಿಕಾರಿಗಳು ಹಲವು ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ಸೇಲ್ಸ್‍ಮನ್ ಆಗಿರುವ ಪಾಂಡೆ ಆತನ ಸಂಬಳಕ್ಕಿಂತ 200 ಪಟ್ಟು ಹೆಚ್ಚು ಆಸ್ತಿಯನ್ನ ಹೊಂದಿದ್ದಾನೆ ಎನ್ನುವುದನ್ನ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.