ಕರ್ನಾಟಕ

ಪಿರಂಗಿಪುರದಲ್ಲಿ ಮುದುಕನಾಗಿ ಸಂಚಾರಿ ವಿಜಯ್

Pinterest LinkedIn Tumblr

pirangi

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹೊಸ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ನಾನು ಅವನಲ್ಲ ಅವಳು ಚಿತ್ರದಲ್ಲಿ ಮಂಗಳಮುಖಿ ಪಾತ್ರದಲ್ಲಿ, ರಿಕ್ತ ಚಿತ್ರದಲ್ಲಿ ಪ್ರೇತದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಂಚಾರಿ ವಿಜಯ್ ಇದೀಗ ಹೊಸ ಚಿತ್ರದಲ್ಲಿ 65 ವರ್ಷದ ವೃದ್ಧನ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೊಸ ಚಿತ್ರ ‘ಪಿರಂಗಿಪುರ’ ಸಿನಿಮಾದಲ್ಲಿ ವಿಜಯ್ ಈ ಹೊಸ ಲುಕ್ ಪ್ರಯೋಗ ಮಾಡುತ್ತಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಧಾರಿತ ಚಿತ್ರವಾಗಿದ್ದು ವಿಜಯ್ ಇದರಲ್ಲಿ ಮೂರು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಯುವಕ, ಮಧ್ಯವಯಸ್ಕ ಹಾಗೂ ವೃದ್ಧನ ಪಾತ್ರವಿದ್ದರೂ ಚಿತ್ರದಲ್ಲಿ ವಿಜಯ್ ಶೇ.70 ನಷ್ಟು ವೃದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಹೊಸ ನಿರ್ದೇಶಕ ಜಾನ್ ಜಾನಿ ಜನಾರ್ದನ್ ನಿರ್ದೇಶನ ಮಾಡುತ್ತಿದ್ದಾರೆ. ಫಿರಂಗಿಪುರದ ಚಿತ್ರೀಕರಣ ಅಕ್ಟೋಬರ್‍ನಿಂದ ಶುರುವಾಗಲಿದೆ.

Comments are closed.