ರಾಷ್ಟ್ರೀಯ

ವಿದ್ಯಾರ್ಥಿಗಳಿಂದಲೇ ಚೂರಿ ಇರಿತಕ್ಕೊಳಗಾಗಿ ಮೃತಪಟ್ಟ ಶಿಕ್ಷಕ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಿದ ಎಎಪಿ ಸರ್ಕಾರ

Pinterest LinkedIn Tumblr

teacher-hatya

ನವದೆಹಲಿ: ಇಬ್ಬರು ವಿದ್ಯಾರ್ಥಿಗಳಿಂದ ಇರಿತಕ್ಕೆ ಒಳಗಾಗಿ ಮೃತಪಟ್ಟ ಶಾಲಾ ಶಿಕ್ಷಕರೊಬ್ಬರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರ ಮಂಗಳವಾರ ಘೋಷಿಸಿದೆ.

ಶಾಲೆಯ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ 12 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ವಜಾ ಮಾಡಿದ್ದಕ್ಕೆ, ಉಳಿದ ಸಹ ವಿದ್ಯಾರ್ಥಿಗಳ ಎದುರಿಗೆ ಮುಖೇಶ್ ಕುಮಾರ್ ಎಂಬ ಸರ್ಕಾರಿ ಶಿಕ್ಷಕರನ್ನು ಈ ಇಬ್ಬರು ವಿದ್ಯಾರ್ಥಿಗಳು ಇರಿದಿದ್ದರು.

ಈ ದಾಳಿಯಾದ ಒಂದು ದಿನದ ನಂತರ ಮಂಗಳವಾರ ಆಸ್ಪತ್ರೆಯಲ್ಲಿ ಗಾಯಗೊಂಡ ಶಿಕ್ಷಕ ಕೊನೆಯುಸಿರೆಳೆದಿದ್ದರು. ಈ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬನು ಅಪ್ರಾಪ್ತನಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ರಾಜ್ಯ ಸರ್ಕಾರ ಕೂಡ ಈ ಪ್ರಕರಣದ ಬಗ್ಗೆ ಮೆಜೆಸ್ಟ್ರೇಟ್ ತನಿಖೆ ನಡೆಸಲು ಆದೇಶಿಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಹೇಳಿದ್ದಾರೆ.

“ಕುಟುಂಬದ ದುಃಖಕ್ಕೆ ಯಾವುದೇ ಪರಿಹಾರ ಸಾಧ್ಯವಿಲ್ಲ… ಅವರ ಆರ್ಥಿಕ ನೆರವಿಗಾಗಿ ಶೀಘ್ರವೇ ಸರ್ಕಾರ 1 ಕೋಟಿ ನೀಡಲಿದೆ” ಎಂದು ಸಿಸೋಧಿಯಾ ಹೇಳಿದ್ದಾರೆ. “ಶಿಕ್ಷಕರಿಗೆ ಗೌರವ ನೀಡುವುದನ್ನು ಎಲ್ಲ ಪೋಷಕರು ಮಕ್ಕಳಿಗೆ ಬೆಳೆಸಬೇಕು” ಎಂದು ಕೂಡ ಅವರು ಕರೆ ಕೊಟ್ಟಿದ್ದಾರೆ.

Comments are closed.