ಕರ್ನಾಟಕ

‘ಕಾವೇರಿ’ಗಾಗಿ ನಾಳೆ ಉಮಾಭಾರತಿ ನೇತೃತ್ವದಲ್ಲಿ ಸಭೆ; ಎರಡೂ ರಾಜ್ಯಗಳ ಸಿಎಂಗೆ ಆಹ್ವಾನ; ಸಂಧಾನ ಕರ್ನಾಟಕಕ್ಕೆ ವರದಾನ ಆಗುತ್ತೋ…

Pinterest LinkedIn Tumblr

 uma

ನವದೆಹಲಿ: ಕಾವೇರಿ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿನ್ನೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು, ಕೊನೆಗೂ ಕೇಂದ್ರ ಮಧ್ಯ ಪ್ರವೇಶಿಸಬೇಕು ಎಂಬ ಸೂಚನೆಯ ಹಿನ್ನೆಲೆಯಲ್ಲಿ ಕರ್ನಾಟಕ ಹಾಗು ತಮಿಳುನಾಡಿನ ಮಧ್ಯೆ ಬಿಕ್ಕಟ್ಟು ಪರಿಹರಿಸಲು ಕೇಂದ್ರ ಸರಕಾರ ಮುಂದಾಗಿದೆ.

ಈ ಹಿನ್ನಲೆಯಲ್ಲಿ ನಾಳೆ(sept.29) ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳ ಸಭೆ ಕರೆಯಲಾಗಿದ್ದು, ಕಾವೇರಿ ನೀರು ಹಂಚಿಕೆ ಕುರಿತ ಸಮಸ್ಯೆ ನಿವಾರಣೆ ಕುರಿತಂತೆ ಚರ್ಚಿಸಲಾಗುತ್ತದೆ. ನವದೆಹಲಿಯಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ಶ್ರಮಶಕ್ತಿ ಭವನದಲ್ಲಿ ನಡೆಯಲಿರುವ ಸಭೆಗೆ ಆಗಮಿಸುವಂತೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ ಕಾವೇರಿ ಕಣಿವೆಯ ಇತರ ರಾಜ್ಯಗಳಾದ ಕೇರಳ ಮತ್ತು ಪುದುಚೇರಿಯ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದಿರಲು ನಿರ್ಧರಿಸಲಾಗಿದೆ.

ಇನ್ನು ನಾಳೆ ನಡೆಯಲಿರುವ ಸಭೆಗೆ ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸೇರಿದಂತೆ ನೀರಾವರಿ ಇಲಾಖೆಯ ಮುಖ್ಯಕಾರ್ಯದರ್ಶಿಗಳು ಭಾಗಿಯಾಗಲಿದ್ದಾರೆ. ಅಂತೆಯೇ ತಮಿಳುನಾಡು ಪರವಾಗಿ ಲೋಕೋಪಯೋಗಿ ಸಚಿವ ಎಡಪ್ಪಾಡಿ ಎಸ್ ಪಳನಿಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ. ಸಿಎಂ ಜಯಲಲಿತಾ ಅವರ ಅನಾರೋಗ್ಯದಿಂದಾಗಿ ಅವರು ನಾಳಿನ ಸಭೆಗೆ ಗೈರಾಗಲಿದ್ದು, ಅವರ ಬದಲಿಗೆ ಪಳನಿ ಸ್ವಾಮಿ ನೇತೃತ್ವದಲ್ಲಿ ಮೂವರ ತಂಡ ನಾಳಿನ ಸಭೆಯಲ್ಲಿ ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 5ರಂದು ಆರಂಭವಾದ ಕಾವೇರಿ ಬಿಕ್ಕಟ್ಟು ಸತತ 22 ದಿನಗಳಿಂದ ಮುಂದುವರಿದೇ ಇದೆ. ಸೆ. 5ರಂದು10 ದಿನಗಳ ಕಾಲ ನಿತ್ಯ 15,000, ಸೆ. 12 ರಂದು ಎಂಟು ದಿನಗಳ ಕಾಲ 12,000 ಕ್ಯುಸೆಕ್‌ ನೀರು ಹರಿಸುವಂತೆ ಆದೇಶ ಹೊರಡಿಸಲಾಗಿತ್ತು. ಇದರಿಂದ ರಾಜ್ಯದಲ್ಲಿ ಪ್ರತಿಭಟನೆ, ಹಿಂಸಾಕೃತ್ಯಗಳಿಗೆ ಕಾವು ದೊರೆತಿತ್ತು.

Comments are closed.