ರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಸುಷ್ಮಾ ಸ್ವರಾಜ್ ಮಾಡಿದ ಭಾಷಣ ಬಗ್ಗೆ ಮೋದಿ ಹೇಳಿದ್ದೇನು…?

Pinterest LinkedIn Tumblr

sushma_swaraj_modi

ನವದೆಹಲಿ: ವಿಶ್ವಸಂಸ್ಥೆ 71ನೇ ಮಹಾಧಿವೇಶನದಲ್ಲಿ ಭಾಷಣ ಮಾಡಿದ್ದ ಸುಶ್ಮಾ ಸ್ವರಾಜ್ ಅವರ ವಾಗ್ ವೈಖರಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಕುರಿತಾದ ವಿಷಯಗಳ ಬಗ್ಗೆ ವಿದೇಶಾಂಗ ಸಚಿವಾಲಯ, ದೃಢ, ಪರಿಣಾಮಕಾರಿಯಾದ ಚರ್ಚೆಯನ್ನು ಮುಂದಿಡುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಭಾಷಣದಲ್ಲಿ ಮೊದಲು ಕಳೆದ ಎರಡು ವರ್ಷಗಳಲ್ಲಿ ಭಾರತ ಸರ್ಕಾರದ ಸಾಧನೆ, ಕಾರ್ಯವೈಖರಿಯನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿದ್ದ ಸುಷ್ಮಾ ಸ್ವರಾಜ್, ನಂತರದ ಹಂತಗಳಲ್ಲಿ ಭಾರತ ಪಾಕಿಸ್ತಾನದೊಂದಿಗೆ ಬೇಷರತ್ ಮೈತ್ರಿಗೆ ಬಯಸುತ್ತಿರುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದಿಯಾಗಿ ಪಾಕ್ ನೊಂದಿಗಿನ ಸೌಹಾರ್ದತೆ ಕಾಯ್ದುಕೊಳ್ಳುವುದಕ್ಕೆ ನಡೆಸುತ್ತಿರುವ ಯತ್ನಗಳು, ಅದರಿಂದ ಭಾರತಕ್ಕೆ ಸಿಕ್ಕ ಭಯೋತ್ಪಾದಕ ದಾಳಿಯ ಪ್ರತಿಫಲಗಳನ್ನು ಎಳೆಎಳೆಯಾಗಿ ವಿಶ್ವಸಮುದಾಯದ ಎದುರು ತೆರೆದಿಟ್ಟಿದ್ದರು.

ಭಯೋತ್ಪಾದನೆ ಇಂದು ಇಡೀ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಭಯೋತ್ಪಾದನೆ ವಿರುದ್ಧ ವಿಶ್ವ ಒಂದಾಗಬೇಕಿದೆ. ಭಯೋತ್ಪಾದಕರಿಗೆ ಸ್ವಂತವಾಗಿ ಬ್ಯಾಂಕ್ ಖಾತೆ ಮತ್ತು ಶಸ್ತ್ರಾಸ್ತ್ರಗಳಿಲ್ಲ. ಹಾಗೆಂದ ಮೇಲೆ ಅವರಿಗೆ ಯಾರು ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಗಾಜಿನ ಮನೆಯಲ್ಲಿ ಜೀವನ ನಡೆಸುತ್ತಿರುವವರು ಇತರರ ಮೇಲೆ ಕಲ್ಲನ್ನು ಎಸೆಯಬಾರದು ಎಂದು ತಮ್ಮ ಭಾಷಣದಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದ ಸುಷ್ಮಾ ಸ್ವರಾಜ್, ಭಯೋತ್ಪಾದನೆಯಲ್ಲಿ ತೊಡಗಿರುವ ದೇಶಗಳು ಮಾತ್ರವಲ್ಲದೇ, ಅಂತಹ ದೇಶಗಳಿಗೆ ಯಾವುದೇ ರೀತಿಯ ಬೆಂಬಲ ನೀಡುತ್ತಿರುವ ದೇಶಗಳನ್ನೂ ಸಹ ಅಂತಾರಾಷ್ಟ್ರೀಯ ಸಮುದಾಯದಿಂದ, ಜಾಗತಿಕ ಪಟ್ಟದಲ್ಲಿ ಪ್ರತ್ಯೇಕಗೊಳಿಸಿ ಒಂಟಿಯಾಗಿಸಬೇಕು ಎಂದು ಕರೆ ನೀಡಿದ್ದರು. ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಅಪಾಯಕಾರಿ ಮುಖವನ್ನು ಬಯಲು ಮಾಡಿದ್ದ ಸುಷ್ಮಾ ಸ್ವರಾಜ್ ಅವರ ಭಾಷಣದಿಂದ ಪ್ರಧಾನಿ ನರೇಂದ್ರ ಮೋದಿ ಸಂತಸಗೊಂಡಿದ್ದು, ಸಮರ್ಥ ಭಾಷಣ ಮಾಡಿದ ವಿದೇಶಾಂಗ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Comments are closed.