ರಾಷ್ಟ್ರೀಯ

ಮನೆ ಕ್ಲೀನಿಂಗು, ಬೈಕ್‌ ವಾಶ್‌ ಮಾಡೋಕೆ ಹೌಸ್‌ಜಾಯ್‌ ರೆಡಿ

Pinterest LinkedIn Tumblr

clinಇದು ಹಬ್ಬಗಳ ಸೀಸನ್‌. ಮುಂದಿನವಾರ ಹಬ್ಬ ಇದೆ ಅಂತ ಗೊತ್ತಿದೆ. ಹಬ್ಬಕ್ಕೆ ಮುಂಚೆ ಮನೆಯನ್ನು ಶುದ್ಧಗೊಳಿಸಿ ನೀಟಾಗಿ ಸಿಂಗರಿಸಬೇಕು. ಆದರೆ ಏನ್‌ ಮಾಡೋದು, ಟೈಮ್‌ ಇಲ್ವಲ್ಲ. ಮನೆಯನ್ನು ಒಪ್ಪಗೊಳಿಸೋದು ಹೇಗೆ? ಹೀಗೆ ಯೋಚಿಸುವವರಿಗೆ ಅಂತಲೇ ಹೌಸ್‌ಜಾಯ್‌ ಸಂಸ್ಥೆ ಇದೆ. ಈ ಹೌಸ್‌ಜಾಯ್‌ ಸಂಸ್ಥೆಯನ್ನು ಸಂಪರ್ಕಿಸಿದರೆ ಅವರೇ ಬಂದು ನಿಮ್ಮ ಮನೆಯನ್ನು ಕ್ಲೀನ್‌ ಮಾಡಿ ಸಿಂಗರಿಸಿ ಹೋಗುತ್ತಾರೆ. ತಲೆಬಿಸಿ ಮಾಡುವ ಅಗತ್ಯವೇ ಇಲ್ಲ.

ಏನಿದು ಹೌಸ್‌ಜಾಯ್‌?
ಹೌಸ್‌ಜಾಯ್‌ ಒಂಥರಾ ಮಹಾನಗರದ ಆಪತಾºಂಧವ ಅಂತ ಹೇಳಬಹುದು. ಯಾಕೆಂದರೆ ಇವರಲ್ಲಿ ಮನೆ ಕ್ಲೀನ್‌ ಮಾಡಿಕೊಡುವ ತಂಡವಿದೆ. ನೀವು ವೆಬ್‌ಸೈಟ್‌ಗೆ ಹೋಗಿ ಒಂದು ಕ್ಲಿಕ್‌ ಮಾಡಿದರೆ ಸಾಕು ಹೌಸ್‌ಜಾಯ್‌ ತಂಡ ಮನೆಗೆ ಬರುತ್ತದೆ. ಮನೆಯನ್ನು ಕ್ಲೀನ್‌ ಮಾಡಿಹೋಗುತ್ತದೆ. ಹಾಗಾಗಿ ಯಾರು ಯಾರಿಗೋ ಫೋನ್‌ ಮಾಡಿ ಕೆಲಸದವರನ್ನು ಹುಡುಕಿ, ಅವರು ಬರುತ್ತಾರೋ ಇಲ್ಲವೋ ಅಂತ ಆತಂಕಪಡುವ ಅಗತ್ಯ ಈಗ ಇಲ್ಲ.

ಬರೀ ಮನೆ ಕ್ಲೀನ್‌ ಮಾಡುವುದಷ್ಟೇ ಅಲ್ಲ, ಬೈಕು ಕಾರು ತೊಳೆಯಬೇಕು ಅಂತಾದರೂ ಹೌಸ್‌ಜಾಯ್‌ಗೆ ಫೋನ್‌ ಮಾಡಬಹುದು. ಬಟ್ಟೆ ತೆಗೆದುಕೊಂಡು ಹೋಗಿ ಇಸ್ತ್ರಿ ಮಾಡಿ ವಾಪಸ್‌ ತಂದು ಕೋಡಬೇಕೆಂದಾದರೂ ಹೌಸ್‌ಜಾಯ್‌ಗೆ ಫೋನ್‌ ಮಾಡಬಹುದು. ನಲ್ಲಿ ಹಾಳಾಗಿದ್ದರೆ, ಕಂಪ್ಯೂಟರ್‌ ರಿಪೇರಿ ಇದ್ದರೆ, ಮನೆಯಲ್ಲಿ ತಿಗಣೆ ಕಾಟ ಇದ್ದರೆ ಹೀಗೆ ಯಾವುದೇ ಸಮಸ್ಯೆ ಇದ್ದರೂ ಯಾವುದೇ ಸಂಕೋಚವಿಲ್ಲದೆ ಹೌಸ್‌ಜಾಯ್‌ ಸಂಪರ್ಕಿಸಬಹುದು. ಅದರ ಜತೆ ಫಿಟ್‌ನೆಸ್‌ ಟ್ರೇನರ್‌, ಬ್ಯೂಟಿಷಿಯನ್‌ಗಳನ್ನೂ ಮನೆಗೆ ಕರೆಸಿಕೊಳ್ಳಬಹುದು.

ನೀವು ಮಾಡಬೇಕಾದುದಿಷ್ಟೇ, ಒಂದೋ ಫೋನ್‌ ಮಾಡಿ ಅಥವಾ ವೆಬ್‌ಸೈಟ್‌ನಲ್ಲಿ ಯಾವ ಸೇವೆ ಬೇಕು ಅಂತ ಬೇಡಿಕೆ ಸಲ್ಲಿಸಿ. ಕೆಲವೇ ಗಂಟೆಗಳಲ್ಲಿ ನಿಮ್ಮ ಮನೆಯಲ್ಲಿ ಹೌಸ್‌ಜಾಯ್‌ ತಂಡ ಹಾಜರ್‌. ಅಂದಹಾಗೆ ಬೆಲ್ಲಿ ಡಾನ್ಸ್‌ ಪ್ರಿಯರು ಯಾರಾದರೂ ಇದ್ದರೆ ಈ ಭಾನುವಾರ ಉಚಿತ ಬೆಲ್ಲಿ ಡಾನ್ಸ್‌ ವರ್ಕ್‌ಶಾಪ್‌ ಅನ್ನು ಹೌಸ್‌ಜಾಯ್‌ ಆಯೋಜಿಸಿದೆ. ಭಾಗವಹಿಸಬಹುದು.

ದೂ- 080ಧಿ33512156
ವೆಬ್‌ಸೈಟ್‌- https://www.housejoy.in/
ಫೇಸ್‌ಬುಕ್‌- https://www.facebook.com/housejoyindia/

-ಉದಯವಾಣಿ

Comments are closed.