ರಾಷ್ಟ್ರೀಯ

ಸೇನೆ ವಶದಲ್ಲಿದ್ದ ಉಪನ್ಯಾಸಕ ಸಾವು: ತನಿಖೆಗೆ ಆದೇಶ

Pinterest LinkedIn Tumblr

Kalllluಶ್ರೀನಗರ (ಏಜೆನ್ಸೀಸ್‌): ಭಾರತೀಯ ಸೇನೆಯ ವಶದಲ್ಲಿದ್ದ ಉಪನ್ಯಾಸಕ ಶಬೀರ್‌ ಅಹ್ಮದ್ ಮಂಗೂ (30) ಎಂಬುವರು ಮೃತಪಟ್ಟಿದ್ದು ಘಟನೆಯ ಬಗ್ಗೆ ತನಿಖೆಗೆ ಸೇನೆ ಆದೇಶಿಸಿದೆ.

ದಕ್ಷಿಣ ಕಾಶ್ಮೀರದ ಪಾಂಪೋರ್‌ನ ಶಾರ್‌ ಗ್ರಾಮದಿಂದ ಬುಧವಾರ ರಾತ್ರಿ ಮಂಗೂ ಸೇರಿದಂತೆ 28 ಮಂದಿಯನ್ನು ಸೇನೆ ವಶಕ್ಕೆ ತೆಗೆದುಕೊಂಡಿತ್ತು.

ಗುರುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮಂಗೂ ಮೃತದೇಹವನ್ನು ಅವರ ಮನೆಯ ಮುಂದೆ ಎಸೆದು ಹೋಗಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಈ ಘಟನೆ ಖಂಡನಾರ್ಹ. ನಿಜ ಸಂಗತಿ ತಿಳಿಯಲು ಸೇನೆ ತನಿಖೆಗೆ ಆದೇಶಿಸಿದೆ’ ಎಂದು ಲೆಫ್ಟಿನೆಂಟ್‌ ಜನರಲ್‌ ಎಸ್‌.ಕೆ. ದುವ ತಿಳಿಸಿದ್ದಾರೆ.

ಮಂಗೂ ಮೃತದೇಹದ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ಗುರುತುಗಳಿವೆ. ಸೈನಿಕರು ಅವರನ್ನು ಹಿಂಸಿಸಿ ಕೊಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Comments are closed.